×
Ad

ಶಿವಮೊಗ್ಗ | ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿ ನಾಪತ್ತೆ

Update: 2024-07-19 22:17 IST

ಶಿವಮೊಗ್ಗ: ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಸೊರಬ ತಾಲೂಕು ಯಡಗೊಪ್ಪ ಗ್ರಾಮದ ಕೆರೆಯಲ್ಲಿ ನಡೆದಿದೆ.

ಉದ್ರಿ ಗ್ರಾಮದ ಯಲ್ಲಪ್ಪ (50) ನಾಪತ್ತೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಆತನಿಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಭಾರಿ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿತ್ತು. ಇದರಿಂದ ನೀರು ರಭಸವಾಗಿ ಹರಿಯುತ್ತಿತ್ತು. ಮೀನು ಹಿಡಿಯಲು ಬಲೆ ಹಾಕಿದ್ದ ಯಲ್ಲಪ್ಪ ಅವರು ಕೆರೆಗೆ ಇಳಿದಿದ್ದರು ಎನ್ನಲಾಗಿದೆ. ಈ ಸಂದರ್ಭ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಯಲ್ಲಪ್ಪ ಅವರ ಸಹೋದರ, ಮಕ್ಕಳು ಕೆರೆ ಬಳಿ ಇದ್ದರು ಎನ್ನಲಾಗಿದೆ. ಆದರೆ ನೀರಿನ ರಭಸಕ್ಕೆ ಯಲ್ಲಪ್ಪ ಅವರ ರಕ್ಷಣೆ ಸಾಧ್ಯವಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸೊರಬ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News