×
Ad

ಪಾಕಿಸ್ತಾನ ಯಾವಾಗಲೂ ಕಳ್ಳ ಹಾದಿಯಲ್ಲಿ ಬಂದು ಭಾರತದ ಮೇಲೆ ದಾಳಿ ನಡೆಸುತ್ತದೆ: ಬಿ.ವೈ ರಾಘವೇಂದ್ರ

Update: 2025-05-07 11:08 IST

ಶಿವಮೊಗ್ಗ: ಶಾಂತಿ ಮಂತ್ರಿ ಪಠಿಸುತ್ತ ಕೂರುವ ಕಾಲ ಇದಲ್ಲ.ನಮ್ಮ ತಾಯಂದಿರು, ಸಹೋದರಿಯರ ಸಿಂಧೂರ ಉಳಿವಿಗಾಗಿ ಆಪರೇಷನ್‌ ಸಿಂಧೂರ ಆರಂಭಿಸಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಇದೆ. ಭಾರತದ ಸೈನಿಕರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿದ್ದಾರೆ. ದಾಳಿಯಲ್ಲಿ ಸುಮಾರು 50 ರಿಂದ 70 ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ ಎಂದರು.

ಪಾಕಿಸ್ತಾನದ ಸೈನಿಕರ ಮೇಲೆ ದಾಳಿಯಾಗಿಲ್ಲ. ಗುಪ್ತಚರ ಮಾಹಿತಿ ಆಧರಿಸಿ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಯಾವುದೇ ಮಸೀದಿ, ನಾಗರಿಕರ ಮೇಲೆ ದಾಳಿಯಾಗಿಲ್ಲ.ಶಾಂತಿ ಮಂತ್ರಿ ಪಠಿಸುತ್ತ ಕೂರುವ ಕಾಲ ಇದಲ್ಲ. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಪಾಕಿಸ್ತಾನ ಯಾವಾಗಲೂ ಕಳ್ಳ ಹಾದಿಯಲ್ಲಿ ಬಂದು ಭಾರತದ ಮೇಲೆ ದಾಳಿ ನಡೆಸುತ್ತದೆ. ಆದರೆ ಭಾರತ ಪಾಕಿಸ್ತಾನದ ಯಾವುದೇ ನಾಗರಿಕರಿಗೂ ತೊಂದರೆ ಮಾಡಿಲ್ಲ. ಉಗ್ರರನ್ನು ಗುರಿಯಾಗಿಸಿಕೊಂಡು ಮಾತ್ರ ದಾಳಿ ನಡೆಸುತ್ತಿದೆ. ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ವರದಿಯಾಗುತ್ತಿದೆ ಎಂದು‌ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News