×
Ad

ಸಾಗರ: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2024-10-01 11:33 IST

ಸಾಗರ: ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ನ ರೈಲ್ವೆ ಹಳಿ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರವುದು ವರದಿಯಾಗಿದೆ.

ಮೃತರನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎಂದು ಗುರುತಿಸಲಾಗಿದೆ.

ಬಸವರಾಜ್ ಅವರ ಬೈಕ್ ಹಾಗೂ ಮೊಬೈಲ್ ಫೋನ್ ರೈಲ್ವೆ ಹಳಿಯ ಪಕ್ಕದಲ್ಲಿ ಪತ್ತೆಯಾಗಿದೆ.

ರೈಲು ಬಡಿದು ಮೃತಪಟ್ಟಿದ್ದರೆ ದೇಹ ಜರ್ಜರಿತವಾಗಿರುತ್ತಿತ್ತು. ಆದರೆ ಮೇಲ್ನೋಟಕ್ಕೆ ಬಸವರಾಜ್ ತಲೆಗೆ ಮಾತ್ರ ಗಾಯಗೊಂಡಂತೆ ಕಾಣಿಸುತ್ತಿದ್ದು, ರೈಲು ಢಿಕ್ಕಿಯಾದ ಕುರುಹು ಗೋಚರಿಸುತ್ತಿಲ್ಲ. ಬೇರೆಲ್ಲೊ  ಕೊಲೆ ಮಾಡಿ ಮೃತದೇಹ ಇಲ್ಲಿ ತಂದು ಹಾಕಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News