×
Ad

ಸಾಗರ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ

Update: 2023-08-13 16:20 IST

ಸಾಗರ, ಆ.13: ಶನಿವಾರದಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಗರದ ಹೊರಭಾಗದಲ್ಲಿ ರವಿವಾರ ನಡೆದಿದೆ.

ಮೃತರನ್ನು ಶ್ರೀಧರ ನಗರದ ಉಮೇಶ್(24) ಎಂದು ಗುರುತಿಸಲಾಗಿದೆ.

ತುಸು ಮಾನಸಿಕ ಅಸ್ಥಿರತೆ ಹಾಗೂ ಅಂಗವೈಕಲ್ಯ ಹೊಂದಿದ್ದ ಉಮೇಶ್ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶ್ರೀಧರ ನಗರದಿಂದ ಶ್ರೀಗಂಧದ ಸಂಕೀರ್ಣದ ಸಮೀಪದ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ತಂದೆ ವಿನಾಯಕ್ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು

ಇಂದು ಎಪಿಎಂಸಿಯಿಂದ ಕೆಳದಿ ರಸ್ತೆಗೆ ತೆರಳುವ ಬೈಪಾಸ್ ರಸ್ತೆಯ ಮೈಲುತುತ್ತದ ಕಾರ್ಖಾನೆ ಪಕ್ಕದ ಕೆರೆಯಂತಹ ತಗ್ಗು ಪ್ರದೇಶದಲ್ಲಿ ಉಮೇಶ್ ಮೃತದೇಹ ಪತ್ತೆಯಾಗಿದೆ. ಮೂತ್ರ ವಿಸರ್ಜನೆಗೆ ತೆರಳಿದ ಉಮೇಶ್ ಕಾಲುಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News