×
Ad

ಸಾಗರ: ಡೆಂಗಿ ಜ್ವರಕ್ಕೆ ನವ ವಿವಾಹಿತೆ ಬಲಿ

Update: 2023-10-08 12:07 IST

ಸಾಗರ, ಅ.8: ಡೆಂಗಿ ಜ್ವರದಿಂದ ಬಳಲುತ್ತಿದ್ದ ಸಾಗರ ತಾಲೂಕಿನ ಗೃಹಿಣಿಯೊಬ್ಬಳು ಚಿಕಿತ್ಸೆ ಫಲಿಸದ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಸಾಗರ ತಾಲೂಕಿನ ತಾಳಗುಪ್ಪ ನಿವಾಸಿ ಮಧುರಾ(31) ಮೃತಪಟ್ಟವರು. ಇವರು ಐದಯ ತಿಂಗಳ ಹಿಂದೆಯಷ್ಟೇ ವಿವಾಹಿತರಾಗಿದ್ದರು.

ಜ್ವರದಿಂದ ಬಳಲುತ್ತಿದ್ದ ಮಧುರಾ ಅವರನ್ನು ಮೂರು ದಿನಗಳ ಹಿಂದೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡೆಂಗಿ ದೃಢಪಟ್ಟಿತ್ತು. ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಮಧುರಾ ಅವರಿಗೆ ವಿಪರೀತ ತಲೆನೋವು, ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ ತೀವ್ರ ಅಸ್ವಸ್ಥಗೊಂಡ ಅವರನ್ನು ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News