×
Ad

ಸಾಗರ: ವಿಹಾರಕ್ಕೆ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

Update: 2024-08-23 11:10 IST

ಶಿವಮೊಗ್ಗ: ಸ್ನೇಹಿತರ ಜೊತೆ ಪಿಕ್ ನಿಕ್ ಗೆಂದು ಬಂದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಮಹಂತಿನ ಮಠದ ಚಂಪಕ ಸರಸುವಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮೃತ ಯುವಕನನ್ನು ಬೆಂಗಳೂರು ಮೂಲದ ಕುಶಾಲ್ (22) ಎಂದು ಗುರುತಿಸಲಾಗಿದೆ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದರಿಂದ ಕುಶಾಲ್ ಮತ್ತು ಗೆಳೆಯರು ಚಂಪಕ ಸರಸುವಿಗೆ ಬಂದಿದ್ದರು ಎನ್ನಲಾಗಿದೆ.

ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆತನ ಸ್ನೇಹಿತನ ಹೇಳಿಕೆಯ ಪ್ರಕಾರ ಕುಶಾಲ್ ಗೆ ಈಜು ಕೂಡ ಬರುತ್ತಿತ್ತು ಆದರೆ ದುರಾದೃಷ್ಟಾವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

‌ 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News