×
Ad

ಸಾಗರ | ತೆಪ್ಪ ಮುಳುಗಿ ಮೂವರು ನಾಪತ್ತೆ, ಇಬ್ಬರು ಪಾರು

Update: 2024-11-13 19:58 IST

ಸಾಂದರ್ಭಿಕ ಚಿತ್ರ(File photo)

ಸಾಗರ : ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಸಾಗರ ತಾಲ್ಲೂಕಿನ ಹೊಳೆಬಾಗಿಲು ಹಿನ್ನೀರಿನಲ್ಲಿ ಬುಧವಾರ ಸಂಜೆ ವರದಿಯಾಗಿದೆ.

ಐವರು ಸ್ನೇಹಿತರು ಸೇರಿಕೊಂಡು ಹೊಳೆಬಾಗಿಲಿನ ನದಿಯಲ್ಲಿ ತೆಪ್ಪದಲ್ಲಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ತೆಪ್ಪ ಮುಳುಗಿ ಸ್ಥಳೀಯ ಯುವಕರಾದ ಸಂದೀಪ್ ಭಟ್, ರಾಜ್ ಕುಮಾರ್, ಚೇತನ್ ಎಂಬುವವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿನಯ್ ಹಾಗೂ ಇನ್ನೋರ್ವ ನದಿಯಲ್ಲಿ ಈಜಿಕೊಂಡು ದಡ ಸೇರಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿ, ಶೋಧ ಕಾರ್ಯ ನಡೆಸುತ್ತಿದೆ. ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News