×
Ad

ಶಿಕಾರಿಪುರ: ಮೆಕ್ಕೆಜೋಳದಲ್ಲಿ ಮೊಳಕೆ, ಸಂಕಷ್ಟದಲ್ಲಿ ರೈತರು

Update: 2025-06-17 12:39 IST

ಶಿವಮೊಗ್ಗ : ಶಿಕಾರಿಪುರ ತಾಲ್ಲೂಕಿನಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ಮೆಕ್ಕೆಜೋಳ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಾಲೂಕಿನ ನೆಲವಾಗಿಲು ಗ್ರಾಮದ ಶೇಖರಪ್ಪಗೌಡ ಅವರು ವ್ಯಾಪಾರಸ್ಥರಿಗೆ ಮಾರಾಟ ಮಾಡುವ ಸಲುವಾಗಿ ಎಪಿಎಂಸಿ ಆವರಣದಲ್ಲಿ 50 ಕ್ವಿಂಟಲ್‌ ಜೋಳ ಹರಡಿದ್ದರು. ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಬಂದಿದ್ದರಿಂದ ಅದನ್ನು ಒಣಗಿಸಲು ಆಗದೆ ಪರದಾಡಬೇಕಾದ ಪರಿಸ್ಥಿತಿಯುಂಟಾಗಿದೆ.

ಮಳೆ ನಿಂತಾಗ ಟಾರ್ಪಲ್ ತೆಗೆಯುವುದು, ಸುರಿಯುವಾಗ ಟಾರ್ಪಲ್ ಮುಚ್ಚುವ ಕೆಲಸ ಮಾಡಿದರೂ ರಸ್ತೆಯಲ್ಲಿ ಹರಿಯುತ್ತಿದ್ದ ನೀರು ಜೋಳದ ರಾಶಿಯ ಒಳಗೆ ಹೋಗಿ ಮೊಳಕೆ ಬಂದಿದೆ. ಈ ಜೋಳ ಮಾರಾಟಕ್ಕೆ ಯೋಗ್ಯವಾಗಿರದ ಕಾರಣಕ್ಕೆ ಅದನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.

ಗೊದ್ದನಕೊಪ್ಪ ಗ್ರಾಮದ ನಾಗರಾಜ್ ಅವರೂ 15 ಕ್ವಿಂಟಲ್ ಜೋಳವನ್ನು ಎಪಿಎಂಸಿ ಆವರಣದಲ್ಲಿ ಒಣಗಿಸಲು ಹಾಕಿದ್ದು. ಅದು ಕೈಸೇರುವುದೂ ಈಗ ಕನಸಿನ ಮಾತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News