×
Ad

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಕಚೇರಿ ಮುಂದೆ ವಾಮಾಚಾರ

Update: 2024-05-02 11:02 IST

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.

 ಈ ಕುರಿತು ತನ್ನ ವಾಟ್ಸ್ ಆಪ್ ನಲ್ಲಿ ಆಕ್ರೋಶ ಹೊರಹಾಕಿರುವ ಈಶ್ವರಪ್ಪ ಅವರು,  ‘ಶಿಕಾರಿಪುರದ ಹೆಸರಾಂತ ಮಾಂತ್ರಿಕರು, ತಮ್ಮ ಕುಟುಂಬವನ್ನು ರಾಜಕೀಯವಾಗಿ ಬೆಳೆಯಲು ಬಲಿ ಕೊಟ್ಟವರು. ಇವರಿಗೆ ಈಶ್ವರಪ್ಪರ ಕುಟುಂಬ ಯಾವ ಲೆಕ್ಕ ಎಂದುಹೇಳಿದ್ದಾರೆ.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು,ಸೋಲಿನ ಭಯದಿಂದ ಅಪ್ಪ‌-ಮಕ್ಕಳು ರಾಷ್ಟ್ರ ಭಕ್ತರ ಚುನಾವಣಾ ಕಛೇರಿಗೆ ವಾಮಾಚಾರ ಮಾಡಿದ್ದಾರೆ. ಜನ ತಿರಸ್ಕಾರ ಮಾಡಿರುವುದು ಅಪ್ಪಮಕ್ಕಳ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ದೇವರು-ಧರ್ಮ ನನ್ನ ಬೆಂಬಲಕ್ಕೆ ಇದೆ. ವಾಮಾಚಾರ ಮಾಡುವ ಯಡಿಯೂರಪ್ಪ ವಿರುದ್ದ ಕಾರ್ಯಕರ್ತರು ಕೆಲಸ‌ ಮಾಡುತ್ತಾರೆ. ನೂರಕ್ಕೆ ನೂರು ಗೆಲ್ಲುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News