×
Ad

ಶಿವಮೊಗ್ಗ | ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

Update: 2024-08-13 13:38 IST

ಶಿವಮೊಗ್ಗ: ಒಂದೇ ಕುಟುಂಬದ ಮೂವರು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯ ಶಿವಮೊಗ್ಗದ ಕ್ಲಾರ್ಕ್‌ ಪೇಟೆಯಲ್ಲಿ ವರದಿಯಾಗಿದೆ.

ಮೃತರನ್ನು ಭುವನೇಶ್ವರಿ, ಮಾರುತಿ ಹಾಗೂ ದರ್ಶನ್‌ ಎಂದು ತಿಳಿದು ಬಂದಿದೆ. ಇವರು ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

ಭುವನೇಶ್ವರಿ ಹಾಗೂ ಅವರ ತಮ್ಮ ಮತ್ತು ಮಗ ಸಾವನ್ನಪ್ಪಿದವರು. ಇವರು ವಿಷ ಸೇವಿಸಿ ಕಳೆದ ರವಿವಾರವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಬಂಧಿಕರೊಬ್ಬರು ಮನೆಯ ಬಳಿಗೆ ಬಂದು ವಿಚಾರಿಸಿದಾಗ ಮೂವರು ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ. ತಕ್ಷಣವೇ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್‌ ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News