×
Ad

ಶಿವಮೊಗ್ಗ: ಫೇಸ್‌ಬುಕ್ ನಲ್ಲಿ ಸುಲಭ ಸಾಲದ ಜಾಹೀರಾತು ನೋಡಿ ಕರೆ ಮಾಡಿದಾತನಿಗೆ 36,500 ರೂ. ಪಂಗನಾಮ!

Update: 2024-01-23 18:13 IST

ಸಾಂದರ್ಭಿಕ ಚಿತ್ರ: PTI

ಶಿವಮೊಗ್ಗ: ಎರಡು ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಫೇಸ್‌ ಬುಕ್‌ನಲ್ಲಿದ್ದ ಜಾಹೀರಾತು ನಂಬಿ ಕರೆ ಮಾಡಿದ್ದ ಭದ್ರಾವತಿ ಯುವಕನಿಗೆ 36,500 ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್‌ಗೆ ಭದ್ರಾವತಿಯ ಯುವಕ ಕರೆ ಮಾಡಿದ್ದ. ಕರೆ ಸ್ವೀಕರಿಸಿ ಮಾತನಾಡಿದ ವ್ಯಕ್ತಿ, ತಾವು ಮಂಗಳೂರಿನ ಫೈನಾನ್ಸ್ ಸಂಸ್ಥೆ ಎಂದು ಪರಿಚಯಿಸಿಕೊಂಡಿದ್ದ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪ್ಯಾನ್ ಕಾರ್ಡ್ ವಿವರ ಕೊಡುವಂತೆ ತಿಳಿಸಿದ್ದ. ದಾಖಲೆಗಳನ್ನು ಕಳುಹಿಸುತ್ತಿದ್ದಂತೆ ಸಾಲ ಮಂಜೂರಾತಿ ಆಗಿದೆ. ಇದರ ಪ್ರೋಸೆಸ್ ಫೀಜ್, ಟ್ಯಾಕ್ಸ್ ಸೇರಿದಂತೆ ನಾನಾ ಕಾರಣಕ್ಕೆ 36,500 ರೂ. ಪಾವತಿಸಬೇಕು ಎಂದು ತಿಳಿಸಿದ್ದ.

ಇದನ್ನು ನಂಬಿದ ಭದ್ರಾವತಿಯ ಯುವಕ 36,500 ರೂ. ಪಾವತಿಸಿದ್ದ. ಆದರೂ ಸಾಲದ ಹಣ ಬಾರದಿದ್ದಾಗ ವಂಚನೆಗೊಳಗಾಗಿದ್ದು ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News