×
Ad

ಶಿವಮೊಗ್ಗ | ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ : ದೂರು ದಾಖಲು

Update: 2025-02-28 10:18 IST

ಶಿವಮೊಗ್ಗ : ವ್ಯಕ್ತಿಯೋರ್ವ ತನ್ನ ತೋಟದಲ್ಲಿ ಮೇಕೆ ಮೇಯಿಸಿದ್ದಾಳೆಂದು ಆರೋಪಿಸಿ ಮಹಿಳೆಯೋರ್ವಳನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಜೋಗಿಹಳ್ಳಿ ಗ್ರಾಮದ ಮಹಿಳೆ ತನ್ನ ತೋಟದಲ್ಲಿ ಮೇಕೆಗಳನ್ನು ಮೇಯಿಸಿದ್ದಾಳೆ ಎಂದು ಕೋಪಗೊಂಡ ತೋಟದ ಮಾಲಕ ಹಾಗೂ ಆತನ ಪುತ್ರ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಂತ್ರಸ್ತೆಯನ್ನು ಸ್ಥಳೀಯರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ತೋಟದ ಮಾಲಕ ರಾಮನಹಳ್ಳಿ ಶಿವಕುಮಾರ್ ಮತ್ತು ಪುತ್ರ ಅರುಣ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News