×
Ad

ಶಿವಮೊಗ್ಗ: ಕೋವಿಡ್ ಸೋಂಕಿನ ಮೊದಲ ಪ್ರಕರಣ ದೃಢ

Update: 2025-05-27 10:58 IST

ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ

ಶಿವಮೊಗ್ಗ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದೆ.

75 ವರ್ಷದ ವೃದ್ಧರೊಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆಯ ನಿವಾಸಿಯಾಗಿರುವ 75ರ ವೃದ್ಧ ಮೇ 19ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಏಳು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರಿಗೆ ಕಫದ ಸಮಸ್ಯೆ ಇದ್ದ ಕಾರಣ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ಮಧ್ಯೆ ಹೃದ್ರೋಗ ಕಾಯಿಲೆ ಗುಣಮುಖ ಆಗಿದ್ದರಿಂದ ಅವರನ್ನು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆಸ್ಪತ್ರೆಯಿಂದ ಅವರು ಬಿಡುಗಡೆಗೊಂಡು ಮನೆ ಸೇರಿದ ಬಳಿಕ ಕೋವಿಡ್ ಟೆಸ್ಟ್ ವರದಿ ಬಂದಿದ್ದು, ಅವರು ಸೋಂಕಿಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶಿವಮೊಗ್ಗ ಡಿಎಚ್ ಒ ಡಾ.ನಾಗರಾಜ ನಾಯ್ಕ, "75 ವರ್ಷದ ಹಾವೇರಿ ಮೂಲದ ಹಿರಿಯ ನಾಗರಿಕರೊಬ್ಬರಿಗೆ ಕೋವಿಡ್ ತಗುಲಿರುವುದು ಟೆಸ್ಟ್ ನಿಂದ ದೃಢಪಟ್ಟಿದೆ. ಅವರು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕವಷ್ಟೇ ಕೋವಿಡ್ ಟೆಸ್ಟ್ ರಿಪೋರ್ಟ್ ಬಂದಿದೆ.  ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಡಿಎಚ್ಒ ಅವರಿಗೆ ಮಾಹಿತಿ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News