ಶಿವಮೊಗ್ಗ | ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ನಾಪತ್ತೆ
Update: 2024-07-22 11:45 IST
ಆನಂದ್ (24)
ಶಿವಮೊಗ್ಗ: ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾದ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಗದಗ ಮೂಲದ ಆನಂದ್ (24) ಜಲಪಾತದ ಬಳಿ ನಾಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ.
ಕಣ್ಮರೆಯಾದ ಯುವಕ ಆನಂದ್ ಜುಲೈ.15ರಂದು ಜೋಗ ಜಲಪಾತಕ್ಕೆ ಬಂದಿದ್ದ ಎನ್ನಲಾಗಿದೆ. ಯಾತ್ರಿ ನಿವಾಸದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ಯುವಕ ತಂದಿದ್ದ ಬ್ಯಾಗ್ ಸಿಕ್ಕಿದ್ದು, ಕಳೆದ ಆರು ದಿನಗಳಿಂದಲೂ ಯುವಕನಿಗಾಗಿ ಶೋಧ ಮುಂದುವರಿಸಲಾಗಿದೆ. ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಯುವಕನ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.