×
Ad

ಶಿವಮೊಗ್ಗ | ಜಮೀನು ವಿವಾದ ; ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿಯ ಹತ್ಯೆ

Update: 2024-05-13 13:32 IST

ಶಿವಮೊಗ್ಗ: ಜಮೀನು ವಿವಾದದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯಲ್ಲಿ ಸೋಮವಾರ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಸತೀಶ್ ನಾಯ್ಕ (28) ಎಂದು ಗುರುತಿಸಲಾಗಿದೆ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಕೊಲೆ ನಡೆದ ಜಮೀನಿನ ವ್ಯಾಜ್ಯವು ಕಳೆದ ಹಲವಾರು ವರ್ಷಗಳಿಂದ ವಿವಾದದಲ್ಲಿತ್ತು. ನ್ಯಾಯಾಲಯವು ಈ ಜಮೀ‌ನಿನೊಳಗೆ ಯಾರೂ ಕೂಡ ತೆರಳದಂತೆ ಇನ್ ಜಂಕ್ಷನ್ ಆದೇಶ ನೀಡಿತ್ತು.

ಮೇ.13 ರಂದು ಬೆಳಿಗ್ಗೆ ಸತೀಶ್ ನಾಯ್ಕ ಈ ಜಮೀನಿಗೆ ತೆರಳಿದ್ದರು ಎನ್ನಲಾಗಿದ್ದು, ಈ ವೇಳೆ ಅಖಿಲೇಶ್ ಗುಂಪಿನೊಂದಿಗೆ ಮಾತಿಗೆ ಮಾತು ಬೆಳೆದಿದೆ. ಸ್ಥಳದಲ್ಲಿದ್ದ ಕುಡುಗೋಲಿನಿಂದ ಗುಂಪು ಹಲ್ಲೆ ನಡೆಸಿದ ಪರಿಣಾಮ ಸತೀಶ್ ನಾಯ್ಕ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News