×
Ad

ಶಿವಮೊಗ್ಗ | ಕಾಡಾನೆ ದಾಳಿಯಿಂದ ತೋಟ, ಹೊಲದಲ್ಲಿನ ಬೆಳೆ ನಷ್ಟ

Update: 2024-09-23 10:51 IST

ಶಿವಮೊಗ್ಗ: ಕಾಡಾನೆ ದಾಳಿಗೆ ತೋಟ, ಹೊಲದಲ್ಲಿನ ಬೆಳೆ ನಷ್ಟವಾದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.

ರಾಜೇಶ್ ಮತ್ತು ಬೀರಪ್ಪ ಎಂಬವರ ತೋಟ, ಹೊಲಗಳಿಗೆ ಎರಡು ಕಾಡಾನೆಗಳು ನುಗ್ಗಿ ಹಾನಿ ಮಾಡಿವೆ. ಅಡಿಕೆ, ತೆಂಗಿನ ಮರಗಳು ಬುಡಮೇಲಾಗಿವೆ. ಜೋಳ, ಕಬ್ಬಿನ ಬೆಳೆ ಕೂಡ ಹಾನಿಯಾಗಿವೆ.

ಕಾಡಾನೆಗಳಿಂದ ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News