×
Ad

ಶಿವಮೊಗ್ಗ | ಖಾಸಗಿ ಬಸ್- ಕಾರು ಢಿಕ್ಕಿ : ಓರ್ವ ಮೃತ್ಯು

Update: 2024-07-03 15:38 IST

ಶಿವಮೊಗ್ಗ : ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರುವ ಘಟನೆ ಶಿರಾಳಕೊಪ್ಪದ ದೇವಿಕೊಪ್ಪ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.  ಖಾಸಗಿ ಬಸ್ ಆನವಟ್ಟಿಯಿಂದ ಶಿವಮೊಗ್ಗ ಕಡೆ ಬರುತ್ತಿದ್ದು, ಕಾರು ಶಿವಮೊಗ್ಗ ಕಡೆಯಿಂದ ಆನವಟ್ಟಿ ಕಡೆಗೆ ಹೊರಟಿತ್ತು. ಅತಿ ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಢಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಹರಸಾಹಸಪಟ್ಟರು ಎನ್ನಲಾಗಿದೆ. ಕಾರು ಚಾಲಕನ ಗುರುತು ಇನ್ನಷ್ಟೆ ತಿಳಿಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News