ಶಿವಮೊಗ್ಗ | ಕೇಂದ್ರ ಕಾರಾಗೃಹದಲ್ಲಿ ಆರೋಪಿಗೆ ಥಳಿಸಿದ ಖೈದಿಗಳು: ವೀಡಿಯೊ ವೈರಲ್
Update: 2025-06-14 19:33 IST
ಶಿವಮೊಗ್ಗ: ಶಿವಮೊಗ್ಗದ ಕೇಂದ್ರ ಕಾರಾಗೃಹ ಆರೋಪಿಯೊಬ್ಬನಿಗೆ ನಾಲ್ಕು ಜನ ಖೈದಿಗಳು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋವೊಂದು ವೈರಲ್ ಆಗಿದೆ.
ಶಿವಮೊಗ್ಗದ ಹೊರವಲಯದ ಸೋಗಾನೆ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಕಿರಣ್ ಎಂಬಾತನಿಗೆ ನಾಲ್ಕು ಖೈದಿಗಳು ಸೇರಿಕೊಂಡು ಥಳಿಸಿದ್ದಾರೆ. ಕಳೆದ ರಾತ್ರಿ ಕಿರಣ್ ಎಂಬಾತನನ್ನು ಅಟ್ರಾಸಿಟಿ ಪ್ರಕರಣದಲ್ಲಿ ಜೈಲಿಗೆ ಕಳಿಸಲಾಗಿತ್ತು. ಜೈಲಿಗೆ ಹೋಗುತ್ತಿದ್ದಂತೆ ಗುರಿಯಾಗಿಸಿದ ಖೈದಿಗಳು ಕಿರಣ್‌ಗೆ ಥಳಿಸಿದ್ದಾರೆ. ಅಲ್ಲದೆ, ಥಳಿಸಿರುವ ವೀಡಿಯೋ ಕೂಡ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.