ಶಿವಮೊಗ್ಗ | 'ಮದ್ಯ ಪಾರ್ಟಿ'ಯಲ್ಲಿ ಗಲಾಟೆ: ಮನೆಗೆ ಆಗಮಿಸಿದ್ದ ಸ್ನೇಹಿತನನ್ನೇ ಕೊಲೆಗೈದ ದುಷ್ಕರ್ಮಿ
ಪವನ್
ಶಿವಮೊಗ್ಗ: ಸ್ನೇಹಿತನ ಮನೆಯಲ್ಲಿ ಮದ್ಯ ಪಾರ್ಟಿ ವೇಳೆ ಗಲಾಟೆಯಾಗಿ ಮನೆಗೆ ಬಂದಿದ್ದ ಸ್ನೇಹಿತನನ್ನೇ ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್ ನಲ್ಲಿ ಗುರುವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಬೊಮ್ಮನಕಟ್ಟೆ ಇ-ಬ್ಲಾಕ್ ನಿವಾಸಿ ಶಿವಕುಮಾರ್(49) ಕೊಲೆ ಆರೋಪಿ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರಿಬ್ಬರು ಗೆಳೆಯರಾಗಿದ್ದು, ಪವನ್ ಗುರುವಾರ ರಾತ್ರಿ ಶಿವಕುಮಾರ್ ಮನೆಗೆ ಪಾರ್ಟಿಗೆಂದು ತೆರೆಳಿದ್ದರು. ಅಲ್ಲಿ ಮದ್ಯ ಸೇವಿಸಿದ ಬಳಿಕ ಅದ್ಯಾವುದೋ ವಿಚಾರವಾಗಿ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪವನ್ ನನ್ನು ಆರೋಪಿ ಶಿವಕುಮಾರ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತಿಳಿಸಿದ್ದಾರೆ.
ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಪವನ್ (28) ಮತ್ತು ಶಿವಕುಮಾರ್ (49) ಕಳೆದ ರಾತ್ರಿ ಪಾರ್ಟಿ ಮುಗಿಸಿ, ಊಟ ಮಾಡಿದ್ದಾರೆ. ರಾತ್ರಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾಗಿದೆ. ಈ ವೇಳೆ ಶಿವಕುಮಾರ್, ಪವನ್ನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು.
ಆರೋಪಿ ಶಿವಕುಮಾರ್ನನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ ಎರಡೂವರೆ ಹೊತ್ತಿಗೆ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಶಿವಕುಮಾರ್ ಬಾಯಿ ಬಿಟ್ಟಿದ್ದಾನೆ ಎಂದವರು ಮಾಹಿತಿ ನೀಡಿದ್ದಾರೆ.