×
Ad

ಶಿವಮೊಗ್ಗ | ಮಗುವಿಗೆ ತುರ್ತು ಚಿಕಿತ್ಸೆ : ಝಿರೋ ಟ್ರಾಫಿಕ್‌ನಲ್ಲಿ ಮಣಿಪಾಲದ ಆಸ್ಪತ್ರೆಗೆ ರವಾನೆ

Update: 2024-12-08 17:49 IST

ಶಿವಮೊಗ್ಗ: ತುರ್ತು ಚಿಕಿತ್ಸೆ ಆಗತ್ಯವಿದ್ದ ಹಿನ್ನಲೆಯಲ್ಲಿ ಮಗುವೊಂದನ್ನು ಝಿರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಿರುವ ಘಟನೆ ರವಿವಾರ ನಡೆದಿದೆ.

ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಸಾಗರ ಮೂಲದ ಸುಮಂಗಳ ಹಾಗೂ ಲೊಕೇಶ್ ದಂಪತಿಯ 6 ದಿನದ ಗಂಡು ಮಗುವಿಗೆ ಐದು ದಿನದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಣಿಪಾಲಕ್ಕೆ ತರಲಾಗುತ್ತಿದೆ. ವೈದ್ಯರು, ಅಧಿಕಾರಿಗಳು ಮತ್ತು ಪೊಲೀಸರು ಮಗುವನ್ನು ರವಾನಿಸಲು ನೆರವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News