×
Ad

ವಿದ್ಯಾರ್ಥಿಗಳಿಂದ ಶಾಲಾ ಸ್ವಚ್ಚತೆ ಮಾಡಿದರೆ ಕಠಿಣ ಕ್ರಮ: ಸಚಿವ ಮಧುಬಂಗಾರಪ್ಪ

Update: 2023-12-29 18:41 IST

ಶಿವಮೊಗ್ಗ: ವಿದ್ಯಾರ್ಥಿಗಳಿಂದ ಶಾಲಾ ಸ್ವಚ್ಚತೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

 ಶಾಲಾ ಸ್ವಚ್ಚತೆ ಹೊಣೆ ಎಸ್​ಡಿಎಂಸಿ ಸಮಿತಿಗೆ

ಕುಪ್ಪಳಿಯಲ್ಲಿ ಭದ್ರಾವತಿಯ ಗುಡ್ಡದ ನೇರಳೆಕೆರೆ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಾಲೆಯಲ್ಲಿ ಸ್ವಚ್ಛತೆ ಕೊರತೆ ಇದೆ. ಇದು ಎಸ್ ಡಿಎಂಸಿ ಜವಾಬ್ದಾರಿ ಆಗಬೇಕು. ಶೌಚಾಲಯ ಸ್ವಚ್ಛತೆಯ ಜವಾಬ್ದಾರಿಯನ್ನು ಎಸ್ ಡಿಎಂಸಿ ತೆಗೆದುಕೊಳ್ಳಬೇಕು. ಕೇವಲ ಶಿಕ್ಷಕರ ಜವಾಬ್ದಾರಿ ಅಲ್ಲ ಎಂದರು.

ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು. ಮಕ್ಕಳಿಂದ ಕೇವಲ ವ್ಯಾಸಂಗ ಮಾಡಿಸಬೇಕು . ಈ ರೀತಿಯ ಘಟನೆಗಳು ಇಲಾಖೆಗೆ, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾರಣವಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News