×
Ad

ತೀರ್ಥಹಳ್ಳಿ : ಫೈನಾನ್ಸ್ ನವರ ಕಿರುಕುಳ ಆರೋಪ; ಲಾರಿ ಮಾಲೀಕ ಆತ್ಮಹತ್ಯೆ

Update: 2025-08-08 14:28 IST

ಶಿವಮೊಗ್ಗ: ಸಂಘಗಳ ಹಾಗೂ ಫೈನಾನ್ಸ್ ನವರ ಕಿರುಕುಳದಿಂದ ಬೇಸತ್ತ ಲಾರಿ ಮಾಲೀಕರೊಬ್ಬರು ಆತ್ಮಹತ್ಯೆಗೈದ ಘಟನೆ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗೆ ಬೈಲು ಸಮೀಪ ನಡೆದಿದೆ.

ಪಟ್ಟಣದ ಕುರುವಳ್ಳಿ ನಿವಾಸಿ ಮಂಜುನಾಥ್ ಹೆಚ್. (ಟಿಪ್ಪರ್ ಮಂಜು) (37) ಆತ್ಮಹತ್ಯೆಗೈದ ವ್ಯಕ್ತಿ.

 ಹಲವು ಸಂಘಗಳಲ್ಲಿ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ಸಾಲ ಮಾಡಿಕೊಂಡಿದ್ದ ಇವರು, ಸಾಲ ಕೊಟ್ಟವರ ಕಿರುಕುಳದಿಂದ ಬೇಸತ್ತು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News