×
Ad

ಬಿಹಾರದಲ್ಲಿ ದಲಿತರ ಮತ ಯಾರಿಗೆ?

Update: 2025-07-23 20:39 IST

ಬಿಹಾರ ಚುನಾವಣೆ ಹತ್ತಿರವಾಗುತ್ತಿದೆ. ದಲಿತ ಮತದಾರರು ಬಹಳ ನಿರ್ಣಾಯಕ ಪಾತ್ರ ವಹಿಸಲಿದ್ದಾರೆಯೆ ಎಂಬ ಕುತೂಹಲ ಮೂಡಿದೆ. ಇತ್ತೀಚಿನ ಸಮೀಕ್ಷೆಯೊಂದು ಅಂಥ ಸಾಧ್ಯತೆಯ ಕಡೆ ಬೆರಳು ಮಾಡಿದೆ.

ಈಗಾಗಲೇ 2022 ರ ಬಿಹಾರ ಜಾತಿ ಸಮೀಕ್ಷೆ ರಾಜ್ಯದ ಜನಸಂಖ್ಯೆಯ 19.65% ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದವರೆಂದು ಹೇಳಿದೆ. ಅಂದರೆ ಪ್ರತಿ ಐದನೇ ಬಿಹಾರಿ ಮತದಾರರು ದಲಿತರಾಗಿದ್ದಾರೆ.

Full View

ಹಾಗಾದರೆ, ಈ ದಲಿತರು ಯಾರ ಕಡೆ ಒಲವು ತೋರುತ್ತಿದ್ದಾರೆ?

ಇದನ್ನು ಸೂಚಿಸುವಂತೆ ಒಂದು ದೊಡ್ಡ ಸಮೀಕ್ಷೆ ಪ್ರಕಟವಾಗಿದೆ. ರಾಷ್ಟ್ರೀಯ ದಲಿತ ಮತ್ತು ಆದಿವಾಸಿ ಸಂಘಗಳ ಒಕ್ಕೂಟ ನಡೆಸಿರುವ ಈ ಸಮೀಕ್ಷೆಯಲ್ಲಿ, ಬಿಹಾರದ 27.4% ಕ್ಕೂ ಹೆಚ್ಚು ದಲಿತ ಮತದಾರರು ಚುನಾವಣಾ ಆಯೋಗದ ಮೇಲೆ ವಿಶ್ವಾಸ ಹೊಂದಿಲ್ಲ ಎಂಬ ಮಹತ್ವದ ಅಂಶವೊಂದು ಬಹಿರಂಗಗೊಂಡಿದೆ.

ಬಿಹಾರದ 58% ಕ್ಕೂ ಹೆಚ್ಚು ದಲಿತ ಮತದಾರರು ನಿರುದ್ಯೋಗ ಅತಿದೊಡ್ಡ ಚುನಾವಣಾ ವಿಷಯ ಎಂದು ಭಾವಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಬಿಹಾರದಲ್ಲಿನ 18,581 ಪರಿಶಿಷ್ಟ ಜಾತಿ ಮತದಾರರನ್ನು ಈ ಸಮೀಕ್ಷೆ ಒಳಗೊಂಡಿತ್ತು.

ಜೂನ್ 10 ರಿಂದ ಜುಲೈ 4 ರ ನಡುವೆ ಇದನ್ನು ನಡೆಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಅಶೋಕ್ ಭಾರ್ತಿ ಹೇಳಿರುವುದು ವರದಿಯಾಗಿದೆ.

ಚುನಾವಣಾ ಆಯೋಗ ನಡೆಸುತ್ತಿರುವ ಮತಪಟ್ಟಿ ಪರಿಷ್ಕರಣೆ ವಿಷಯದಲ್ಲೂ ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ಪಡೆಯಲಾಗಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 71% ಕ್ಕಿಂತ ಹೆಚ್ಚು ಜನರು

ತಮ್ಮ ಮತ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ.

23.4% ಕ್ಕಿಂತ ಹೆಚ್ಚು ಜನರು ಹಾಗೇನೂ ಅಗಲಾರದು ಎಂದಿದ್ದಾರೆ. 5% ಕ್ಕಿಂತ ಸ್ವಲ್ಪ ಹೆಚ್ಚು ಜನರು ಇದರ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಆದರೆ, ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿದೆ ಎಂಬುದರ ಬಗ್ಗೆ 27% ಕ್ಕಿಂತ ಹೆಚ್ಚು ಜನರಿಗೆ ಅನುಮಾನವಿದೆ. ಅವರಿಗೆ ಆಯೋಗದಲ್ಲಿ ನಂಬಿಕೆಯಿಲ್ಲ.

ನಂಬಿಕೆಯಿದೆ ಎಂದವರು ಸುಮಾರು 51% ಜನರು ಎಂದು ಸಮೀಕ್ಷೆ ಹೇಳಿದೆ. 21% ಜನರು ತಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನೆಚ್ಚಿನ ರಾಜಕೀಯ ನಾಯಕ ಯಾರೆಂಬ ಪ್ರಶ್ನೆಯನ್ನು ಕೂಡ ಸಮೀಕ್ಷೆಯಲ್ಲಿ ಕೇಳಲಾಗಿತ್ತು.

ಪ್ರತಿಕ್ರಿಯಿಸಿದವರಲ್ಲಿ ಶೇ. 47.5 ಕ್ಕಿಂತ ಹೆಚ್ಚು ಜನರು ಪ್ರಧಾನಿ ನರೇಂದ್ರ ಮೋದಿಯನ್ನು ರಾಷ್ಟ್ರಮಟ್ಟದಲ್ಲಿ ತಮ್ಮ ನೆಚ್ಚಿನ ನಾಯಕ ಎಂದು ಹೇಳಿದರೆ, ಶೇ. 40.3 ರಷ್ಟು ಜನರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂದಿದ್ದಾರೆ. ಶೇ. 12 ರಷ್ಟು ಜನರು ಇತರ ರಾಜಕಾರಣಿಗಳ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ಜಾತಿ ಜನಗಣತಿ ಕ್ರೆಡಿಟ್ ಮೋದಿಯವರಿಗೆ ಸಲ್ಲಬೇಕು ಎಂದು ಶೇ. 33.15 ರಷ್ಟು ಜನರು ಹೇಳಿದರೆ, ರಾಹುಲ್ ಗಾಂಧಿ ಎಂದು ಶೇ. 30.81 ರಷ್ಟು ಜನರು ಹೇಳಿದ್ದಾರೆ. ಶೇ. 27.57 ರಷ್ಟು ಜನರು ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರಿಗೆ ಇದರ ಕ್ರೆಡಿಟ್ ಸಲ್ಲಬೇಕು ಎಂದು ಹೇಳಿದ್ದಾರೆ. ಶೇ. 8 ರಷ್ಟು ಜನರು ಇತರ ರಾಜಕಾರಣಿಗಳ ಹೆಸರುಗಳನ್ನು ಹೇಳಿದ್ದಾರೆ.

ಸುಮಾರು ಶೇ. 48 ರಷ್ಟು ಜನರು ನಿತೀಶ್ ಕುಮಾರ್

ನೇತೃತ್ವದ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ. 45 ರಷ್ಟು ಜನರು ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿರುವುದಾಗಿ ಸಮೀಕ್ಷೆ ತಿಳಿಸಿದೆ.

ದಲಿತರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ, ಮಹಾಘಟಬಂಧನ್ ಪರವಾಗಿ ಒಲವು ವ್ಯಕ್ತವಾಗಿರುವುದು ಕಂಡುಬಂದಿದೆ. ದಲಿತ ಸಮಾಜದಲ್ಲಿ ಎನ್‌ಡಿಎ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಸುಳಿವುಗಳು ಇಲ್ಲಿ ಕಂಡಿವೆ.

ನರೇಂದ್ರ ಮೋದಿ ರಾಷ್ಟ್ರಮಟ್ಟದಲ್ಲಿ ದಲಿತರ ದೊಡ್ಡ ನಾಯಕ. ಆದರೆ ರಾಜ್ಯದ ವಿಷಯಕ್ಕೆ ಬಂದಾಗ, ನಿತೀಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ದಲಿತರಲ್ಲಿ ನಿತೀಶ್ ಕುಮಾರ್ ಬಗ್ಗೆ ಅಷ್ಟೊಂದು ಸಮಾಧಾನವಿಲ್ಲ. ನಿತೀಶ್ ಕುಮಾರ್ ಸರ್ಕಾರದ ಕಾರ್ಯವೈಖರಿ ಬಗ್ಗೆ ದಲಿತರು ಹೆಚ್ಚು ಸಂತೋಷವಾಗಿಲ್ಲ.

ದಲಿತರು ಸಹ ಇಬಿಸಿ ವರ್ಗದೊಂದಿಗೆ ತಮ್ಮನ್ನು ಜೋಡಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗೆಯೇ ಚಿರಾಗ್ ಪಾಸ್ವಾನ್ ವಿಷಯದಲ್ಲಿಯೂ ಸಂಬಂಧ ಮೊದಲಿನಂತಿಲ್ಲ.

ಆದರೆ ದಲಿತರಲ್ಲಿ 80% ರಷ್ಟು ಜನರು ಮಹಾಘಟಬಂಧನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರತಿ ಮತ ಮೌಲ್ಯಯುತವಾಗಿದೆ, ಆದ್ದರಿಂದ ಈ ಸಮೀಕ್ಷೆ ಬಹಿರಂಗಗೊಳಿಸಿರುವ ಡೇಟಾ ಬಹಳ ಮುಖ್ಯವಾಗುತ್ತದೆ.

ದಲಿತರಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ ಗಮನಿಸಿದರೆ, ಅದು ಚುನಾವಣಾ ಆಯೋಗಕ್ಕೆ ಎಚ್ಚರಿಕೆಯ ಗಂಟೆಯಂತಿದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ 71% ದಲಿತರು

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಇಲ್ಲವಾಗುವ ಬಗ್ಗೆ ಭಯಪಡುತ್ತಿದ್ದಾರೆ.

ರಾಹುಲ್ ಗಾಂಧಿ ಮೀಸಲಾತಿ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿರುವಾಗ, 82% ದಲಿತರು ಅದಕ್ಕೆ ಸಹಮತ ವ್ಯಕ್ತಪಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಅದನ್ನು 50% ಮಿತಿಯಿಂದ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.ದಲಿತರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರದಲ್ಲಿ 15% ಮೀಸಲಾತಿ ಪಡೆಯುತ್ತಿದ್ದಾರೆ. ದಲಿತ ಸಮಾಜ ಮೀಸಲಾತಿ ಮಿತಿ ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದೆ.

ಬಿಹಾರದಲ್ಲಿ ಯಾವ ನಾಯಕನನ್ನು ಮುಖ್ಯಮಂತ್ರಿಯಾಗಿ ದಲಿತರು ಹೆಚ್ಚು ಇಷ್ಟಪಡುತ್ತಾರೆ

ಅಥವಾ ದಲಿತರು ಹೆಚ್ಚು ನಂಬುವ ನಾಯಕ ಯಾರು ಎಂಬ ಪ್ರಶ್ನೆಗೂ ಕುತೂಹಲಕಾರಿ ಉತ್ತರ ಬಂದಿದೆ. ತೇಜಸ್ವಿ ಯಾದವ್ ಅವರನ್ನು ತಮ್ಮ ನಾಯಕ ಎಂದು ಸ್ವೀಕರಿಸಲು ಸಿದ್ಧರಿರುವ 29% ದಲಿತರಿದ್ದಾರೆ. ನಿತೀಶ್ ಎರಡನೇ ಸ್ಥಾನದಲ್ಲಿಯೂ ಇಲ್ಲ. ಚಿರಾಗ್ ಪಾಸ್ವಾನ್ 26% ದಲಿತರ ಒಲವಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ನಿತೀಶ್ ಕುಮಾರ್ ಬಗ್ಗೆ 23% ದಲಿತರು ಒಲವು ತೋರಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಅವರ ಬಳಿಕ ಜಿತನ್ ರಾಮ್ ಮಾಂಝಿ ಮತ್ತು ಪ್ರಶಾಂತ್ ಕಿಶೋರ್ ಬರುತ್ತಾರೆ.

ಹಾಗೆ ನೋಡಿದರೆ, ಇದು ದಲಿತರ ಅಭಿಪ್ರಾಯ ಮಾತ್ರವಲ್ಲ. ಬಿಹಾರದಾದ್ಯಂತ ಸಿ ವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿಯಾಗಿ

ತೇಜಸ್ವಿ ಯಾದವ್ ಅವರನ್ನು ಸುಮಾರು 36-37% ಜನರು ಇಷ್ಟಪಟ್ಟಿದ್ದಾರೆ. ಪ್ರಶಾಂತ್ ಕಿಶೋರ್ ಬಗ್ಗೆ 19%, ನಿತೀಶ್ ಕುಮಾರ್ ಬಗ್ಗೆ 17-18% ಮತ್ತು

ಚಿರಾಗ್ ಪಾಸ್ವಾನ್ ಬಗ್ಗೆ ಸುಮಾರು 10 ರಿಂದ 11% ಜನರು ಒಲವು ವ್ಯಕ್ತಪಡಿಸಿದ್ದರು.

ಜಾತಿ ಜನಗಣತಿಯ ಕ್ರೆಡಿಟ್ ಯಾರಿಗೆ ಎನ್ನುವ ವಿಷಯದಲ್ಲಿ ಮಾತ್ರ ಸ್ವಲ್ಪ ಗೊಂದಲಮಯ ಉತ್ತರ ಬಂದಿದೆ. ಆ ಕ್ರೆಡಿಟ್ ಅನ್ನು ಮೋದಿಗೆ ನೀಡುವುದಾಗಿ 33% ದಲಿತರು ಹೇಳಿದ್ದಾರೆ. 31% ಜನರು ರಾಹುಲ್ ಗಾಂಧಿಗೆ ನೀಡುವುದಾಗಿ ಹೇಳಿದ್ದಾರೆ.

ಇದು ಖಂಡಿತವಾಗಿಯೂ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಆದರೆ 27% ಜನರು ತೇಜಸ್ವಿ ಯಾದವ್ ಅವರಿಗೆ ಕ್ರೆಡಿಟ್ ನೀಡುತ್ತಿದ್ದಾರೆ. ಏಕೆಂದರೆ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಇಂಡಿಯಾ ಒಕ್ಕೂಟದ ಭಾಗವಾಗಿದ್ದಾರೆ. ಶೇ. 58 ರಷ್ಟು ದಲಿತರು ಜಾತಿ ಜನಗಣತಿಯ ಶ್ರೇಯವನ್ನು ಒಂದು ರೀತಿಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ನೀಡುತ್ತಿದ್ದಾರೆ.

2020 ರಲ್ಲಿಯೂ ಇದೇ ರೀತಿಯ ಸಮೀಕ್ಷೆ ನಡೆದಿತ್ತು.

ಆಗ ಶೇ. 46 ರಷ್ಟು ದಲಿತರು ಮಹಾಮೈತ್ರಿಕೂಟದೊಂದಿಗಿದ್ದರು. ಶೇ. 36 ರಷ್ಟು ದಲಿತರು ಎನ್‌ಡಿಎ ಜೊತೆಗಿದ್ದರು. ಆಗಲೂ, ಎನ್‌ಡಿಎಗೆ ಮಹಾ ಮೈತ್ರಿಕೂಟಕ್ಕಿಂತ ಸ್ವಲ್ಪ ಕಡಿಮೆ ದಲಿತರ ಬೆಂಬಲ ಸಿಕ್ಕಿತ್ತು. ಆದರೆ ಈ ಬಾರಿ ಸ್ಥಿತಿ ಹದಗೆಟ್ಟಂತಿದೆ.

ರಾಷ್ಟ್ರಮಟ್ಟದಲ್ಲಿ, ದಲಿತರ ದೃಷ್ಟಿಯಲ್ಲಿ ಅತಿದೊಡ್ಡ ನಾಯಕ ಮೋದಿಯಾಗಿದ್ದಾರೆ. 47% ದಲಿತರು ಮೋದಿ ಬಗ್ಗೆ ಒಲವು ತೋರಿಸಿದ್ಧಾರೆ. ಆದರೆ ರಾಹುಲ್ ಗಾಂಧಿ ಕೂಡ ಹಿಂದೆ ಬಿದ್ದಿಲ್ಲ. ರಾಹುಲ್ ಗಾಂಧಿ ಸುಮಾರು 41% ದಲಿತರ ಒಲವು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

46.13% ದಲಿತರು ಮಹಾ ಮೈತ್ರಿಕೂಟದೊಂದಿಗೆ ಹೋಗುವುದಾಗಿ ಹೇಳಿದ್ದಾರೆ. ಅಂದರೆ ತೇಜಸ್ವಿ ಯಾದವ್ ಹಾಗು ರಾಹುಲ್ ಗಾಂಧಿಯವರೊಂದಿಗೆ ಅವರಿದ್ದಾರೆ. ಸುಮಾರು 32% ಜನರು ಎನ್ಡಿಎ ಜೊತೆ ಹೋಗುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ, 14% ವ್ಯತ್ಯಾಸವಿದೆ.

ಆಗ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ. 22% ದಲಿತರು ಆಗ ಇತರರೊಂದಿಗೆ ಹೋಗುತ್ತಾರೆ. ಯಾರೆಲ್ಲರೂ ಇತರರಲ್ಲಿ ಸೇರಿರಬಹುದು? ಪ್ರಶಾಂತ್ ಕಿಶೋರ್ ಕೂಡ ಅದರಲ್ಲಿ ಇರುತ್ತಾರೆ. ಅಂದರೆ, ಪ್ರಶಾಂತ್ ಕಿಶೋರ್ ಕೂಡ ದಲಿತರ ಬೆಂಬಲವು ಉತ್ತಮ ಪ್ರಮಾಣದಲ್ಲಿಯೆ ಪಡೆಯುವ ಸಾಧ್ಯತೆ ಇರುವಂತಿದೆ.

ಸಿ ವೋಟರ್ ಹೇಳಿದ್ದ ಪ್ರಕಾರ, 45% ಜನರು ನಿರುದ್ಯೋಗವೇ ದೊಡ್ಡ ಸಮಸ್ಯೆ ಎಂದು ನಂಬುತ್ತಾರೆ. ದಲಿತರನ್ನು ಕೇಳಿದಾಗಲೂ, 58.9% ಅಂದರೆ 59% ದಲಿತರು ನಿರುದ್ಯೋಗವೇ ದೊಡ್ಡ ಸಮಸ್ಯೆ ಎಂದಿದ್ದಾರೆ.

ಸುಮಾರು 60-62% ಜನರು ಬದಲಾವಣೆಯಾಗಬೇಕು ಎಂದು ಬಯಸುತ್ತಾರೆ. ಎನ್‌ಡಿಎ ಸರ್ಕಾರ ನಿರುದ್ಯೋಗ ನಿವಾರಿಸುವಲ್ಲಿ ಮತ್ತು ಜನರು ನಿರೀಕ್ಷಿಸಿದಷ್ಟು ಉದ್ಯೋಗಾವಕಾಶ ಒದಗಿಸುವಲ್ಲಿ ವಿಫಲವಾಗಿದೆ.

ಮತ ಚಲಾಯಿಸುವ ಮೊದಲು ಏನನ್ನು ಗಮನಿಸಿ ಮತ ನೀಡುತ್ತೀರಿ ಎಂಬ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. 45% ದಲಿತರು ಅಭ್ಯರ್ಥಿಯ ಹೆಸರು ಮತ್ತು ಅವರ ಕೆಲಸವನ್ನು ನೋಡಿದ ನಂತರ ಮತ ಚಲಾಯಿಸುವುದಾಗಿ ಹೇಳಿದ್ಧಾರೆ. 32% ಜನರು ಪಕ್ಷ ಅಥವಾ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಜಾತಿಯ ಆಧಾರದ ಮೇಲೆ 12% ಜನರು ಜಾತಿಯ ಆಧಾರದ ಮೇಲೆ ಮತ ನೀಡುವುದಾಗಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!