ಮೊದಲ ಟ್ವೆಂಟಿ-20: ವಿಂಡೀಸ್ ವಿರುದ್ಧ ಭಾರತಕ್ಕೆ 4 ರನ್ ಸೋಲು
Photo:twitter/ICC
ಟ್ರಿನಿಡಾಡ್, ಆ.3: ಚೊಚ್ಚಲ ಪಂದ್ಯವನ್ನಾಡಿದ ತಿಲಕ್ ವರ್ಮಾ(39 ರನ್, 22 ಎಸೆತ), ಸೂರ್ಯಕುಮಾರ್ ಯಾದವ್(21 ರನ್) ನಾಯಕ ಹಾರ್ದಿಕ್ ಪಾಂಡ್ಯ(19 ರನ್) ಹಾಗೂ ಸಂಜು ಸ್ಯಾಮ್ಸನ್(12 ರನ್) ಹೋರಾಟದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನು 4 ರನ್ ಅಂತರದಿಂದ ಸೋತಿದೆ. ಈ ಗೆಲುವಿನ ಮೂಲಕ ವಿಂಡೀಸ್ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 150 ರನ್ ಗುರಿ ಪಡೆದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿಂಡೀಸ್ ಪರ ಜೇಸನ್ ಹೋಲ್ಡರ್(2-19) , ಒಬೆಡ್ ಮೆಕ್‌ಕಾಯ್(2-28)ಹಾಗೂ ಶೆಫರ್ಡ್(2-33) ತಲಾ 2 ವಿಕೆಟ್‌ಗಳನ್ನು ಪಡೆದರು.ಅಕೀಲ್ ಹುಸೇನ್(1-17 ಒಂದು ವಿಕೆಟ್ ಪಡೆದರು.ಸಂಜು ಸ್ಯಾಮ್ಸನ್ ಹಾಗೂ ಅರ್ಷದೀಪ್ ಸಿಂಗ್ ರನೌಟಾದರು. ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು.