×
Ad

ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ. ದಂಡ

Update: 2024-04-17 21:56 IST

 ಶ್ರೇಯಸ್ ಅಯ್ಯರ್ | PC : PTI 

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವ ಕಾರಣಕ್ಕೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ನಾಯಕ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕೋಲ್ಕತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೆಕೆಆರ್ ತಂಡವು ಎರಡು ವಿಕೆಟ್ ಗಳ ಅಂತರದಿಂದ ಸೋಲುಂಡಿತ್ತು. ಜೋಸ್ ಬಟ್ಲರ್ ಕೇವಲ 60 ಎಸೆತಗಳಲ್ಲಿ ಔಟಾಗದೆ 107 ರನ್ ಗಳಿಸಿ ರಾಜಸ್ಥಾನದ ಗೆಲುವಿನ ರೂವಾರಿಯಾಗಿದ್ದರು.

ಐಪಿಎಲ್ ಸಂಘಟಕರು ಹೇಳಿಕೆಯನ್ನು ಬಿಡುಗಡೆ ಮಾಡಿ ಶ್ರೇಯಸ್ ಅಯ್ಯರ್ ಗೆ ದಂಡ ವಿಧಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ನಿಧಾನಗತಿಯ ಬೌಲಿಂಗ್ ಗೆ ಸಂಬಂಧಿಸಿ ಐಪಿಎಲ್ ನ ನೀತಿ ಸಂಹಿತೆಯ ಅಡಿಯಲ್ಲಿ ಶ್ರೇಯಸ್ ಅಯ್ಯರ್ ಅವರ ತಂಡ ಮೊದಲ ಬಾರಿ ಈ ತಪ್ಪೆಸಗಿದೆ. ಅಯ್ಯರ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News