×
Ad

ನಾಳೆ(ನ.2) ಭಾರತ-ಆಸ್ಟ್ರೇಲಿಯ ಮಧ್ಯೆ 3ನೇ ಟಿ-20 ಪಂದ್ಯ; ಅರ್ಷದೀಪ್ ಅವಕಾಶ ಪಡೆಯುವ ಸಾಧ್ಯತೆ

Update: 2025-11-01 20:36 IST

 ಅರ್ಷದೀಪ ಸಿಂಗ್‌ | Photo Credit : PTI 

ಹೊಬರ್ಟ್, ನ.1:ಮೆಲ್ಬರ್ನ್‌ನಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡ ಹೊಬರ್ಟ್‌ನಲ್ಲಿ ರವಿವಾರ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ 3ನೇ ಟಿ-20 ಪಂದ್ಯದಲ್ಲಿ ಆಡುವ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

ಭಾರತವು ಸದ್ಯ 5 ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿದೆ. ಟೀಮ್ ಇಂಡಿಯಾವು ಕುಲದೀಪ ಯಾದವ್ ಅಥವಾ ಹರ್ಷಿತ್ ರಾಣಾ ಬದಲಿಗೆ ಅರ್ಷದೀಪ ಸಿಂಗ್‌ ಗೆ ಅವಕಾಶ ನೀಡುವ ನಿರೀಕ್ಷೆ ಇದೆ.

ಭಾರತದ ಅತ್ಯಂತ ಯಶಸ್ವಿ ಟಿ20 ಬೌಲರ್ ಅರ್ಷದೀಪ್ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಇದೀಗ ಭಾರತವು ಹಿನ್ನಡೆಯಲ್ಲಿದ್ದು, ಟೀಮ್ ಮ್ಯಾನೇಜ್‌ಮೆಂಟ್ ಓರ್ವ ಸ್ಪಿನ್ನರನ್ನು ಕೈಬಿಟ್ಟು ಅರ್ಷದೀಪ್‌ ಗೆ ಅವಕಾಶ ಕಲ್ಪಿಸಬೇಕಾಗಿದೆ. ಹರ್ಷಿತ್ ಕಳೆದ ಪಂದ್ಯದಲ್ಲಿ 35 ರನ್ ಗಳಿಸಿದ ಕಾರಣ ಕುಲದೀಪ್ ಆಡುವ ಬಳಗದಿಂದ ಹೊರಗುಳಿಯಬಹುದು.

ಮುಂಬರುವ ಆ್ಯಶಸ್ ಸರಣಿಯಲ್ಲಿ ತಯಾರಿ ನಡೆಸಲು ಜೋಶ್ ಹೇಝಲ್‌ವುಡ್ ಸರಣಿಯ ಕೊನೆಯ 3 ಪಂದ್ಯಗಳಿಂದ ಹೊರಗುಳಿಯಲಿದ್ದು, ಆಸ್ಟ್ರೇಲಿಯ 1 ಬದಲಾವಣೆ ಮಾಡಬಹುದು. ಹೀಗಾಗಿ 33ರ ಹರೆಯದ ಸೀಯನ್ ಅಬಾಟ್ ಆಡುವ ಬಳಗ ಸೇರಲಿದ್ದಾರೆ.

ಭಾರತ(ಸಂಭಾವ್ಯ): ಶುಭಮನ್ ಗಿಲ್(ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ ಯಾದವ್(ನಾಯಕ), ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್‌ಪ್ರಿತ್ ಬುಮ್ರಾ, ಅರ್ಷದೀಪ ಸಿಂಗ್, ವರುಣ್ ಚಕ್ರವರ್ತಿ.

ಆಸ್ಟ್ರೇಲಿಯ(ಸಂಭಾವ್ಯ): ಮಿಚೆಲ್ ಮಾರ್ಷ್(ನಾಯಕ),ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್(ವಿಕೆಟ್‌ಕೀಪರ್), ಮ್ಯಾಥ್ಯೂ ಶಾರ್ಟ್,ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೋಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸೀಯನ್ ಅಬಾಟ್, ತನ್ವೀರ್ ಸಂಘಾ.

* ಪಂದ್ಯ ಆರಂಭ ಸಮಯ: ಮಧ್ಯಾಹ್ನ 1:45

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News