×
Ad

ಐಪಿಎಲ್ ನಿಯಮ ಉಲ್ಲಂಘನೆ ಆರೋಪ | ಮುಂಬೈ ತಂಡದ ಕಿರೊನ್ ಪೊಲಾರ್ಡ್, ಡೇವಿಡ್ ಗೆ ದಂಡ

Update: 2024-04-20 21:47 IST

  ಕಿರೊನ್ ಪೊಲಾರ್ಡ್,  ಟಿಮ್ ಡೇವಿಡ್   | PC : NDTV 

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎಪ್ರಿಲ್ 18ರಂದು ಚಂಡಿಗಡದ ಮುಲ್ಲನ್ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದ ಆರೋಪದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್ ಹಾಗೂ ಬ್ಯಾಟಿಂಗ್ ಕೋಚ್ ಕಿರೊನ್ ಪೊಲಾರ್ಡ್ ಅವರಿಗೆ ಪಂದ್ಯದ ಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಲಾಗಿದೆ.

ಐಪಿಎಲ್ ನಿಯಮದ ಆರ್ಟಿಕಲ್ 2.20ರ ಅಡಿಯಲ್ಲಿ ಲೆವೆಲ್ 1 ನಿಯಮವನ್ನು ಡೇವಿಡ್ ಹಾಗೂ ಪೊಲಾರ್ಡ್ ಉಲ್ಲಂಘಿಸಿದ್ದು ಮ್ಯಾಚ್ ರೆಫರಿ ವಿಧಿಸಿರುವ ದಂಡವನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ಗೆ ಡಿಆರ್ಎಸ್ ಮೇಲ್ಮನವಿ ಮಾಡುವಂತೆ ಡಗೌಟ್ ನಲ್ಲಿದ್ದ ಟಿಮ್ ಡೇವಿಡ್ ಹಾಗೂ ಕಿರೊನ್ ಪೊಲಾರ್ಡ್ ಸನ್ನೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಸೂರ್ಯಕುಮಾರ್ಗೆ ಮುಂಬೈ ತಂಡದ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಅವರು ವೈಡ್ ಎಂದು ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಡಿಆರ್ಎಸ್ ಮನವಿಗೆ ಪೊಲಾರ್ಡ್ ಹಾಗೂ ಡೇವಿಡ್ ಸನ್ನೆ ಮಾಡಿರುವುದು ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮುಂಬೈ ಡಗೌಟ್ನಿಂದ ಆಟಗಾರರಿಗೆ ಸೂಚನೆ ನೀಡುವುದನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ತಕ್ಷಣವೇ ಫೀಲ್ಡ್ ಅಂಪೈರ್ಗಳ ಗಮನಕ್ಕೆ ತಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News