×
Ad

ಕೇರಳದಲ್ಲಿ ಅರ್ಜೆಂಟೀನ ಜೊತೆ ಆಸ್ಟ್ರೇಲಿಯ ಆಡುವುದೇ?

ನವೆಂಬರ್‌ನಲ್ಲಿ ಲಿಯೊನೆಲ್ ಮೆಸ್ಸಿ ತಂಡ ಆಗಮನ

Update: 2025-09-23 22:32 IST

ಲಿಯೊನೆಲ್ ಮೆಸ್ಸಿ | PC : X \ @WeAreMessi

ತಿರುವನಂತಪುರಂ, ಸೆ. 23: ತಾರಾ ಆಟಗಾರ ಲಿಯೊನೆಲ್ ಮೆಸ್ಸಿಯನ್ನು ಒಳಗೊಂಡ ಅರ್ಜೆಂಟೀನ ಫುಟ್ಬಾಲ್ ತಂಡವು ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಿದಾಗ, ಅದು ಕೊಚ್ಚಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯವನ್ನು ಆಡುವ ಸಾಧ್ಯತೆ ದಟ್ಟವಾಗಿದೆ ಎಂದು ಕ್ರೀಡಾ ಇಲಾಖೆಯಲ್ಲಿರುವ ಅಧಿಕೃತ ಮೂಲಗಳು ತಿಳಿಸಿವೆ. ಈ ಪಂದ್ಯಕ್ಕೆ ದಿನವನ್ನು ನಿಗದಿಪಡಿಸಲಾಗಿಲ್ಲವಾದರೂ, ಅದು ನವೆಂಬರ್ 12 ಮತ್ತು 18ರ ನಡುವೆ ಯಾವುದಾದರೊಂದು ದಿನ ಕೊಚ್ಚಿಯಲ್ಲಿ ನಡೆಯಬಹುದು ಎನ್ನಲಾಗಿದೆ.

ನವೆಂಬರ್ 12ರಿಂದ 18ರವರೆಗೆ ಅರ್ಜೆಂಟೀನ ತಂಡವು ಕೇರಳದಲ್ಲಿರುತ್ತದೆ.

2022ರ ವಿಶ್ವಕಪ್ ಗೆದ್ದ ಅರ್ಜೆಂಟೀನ ತಂಡದ ಜೊತೆಗೆ ಆಸ್ಟ್ರೇಲಿಯ ಆಡುವ ಸಾಧ್ಯತೆಗಳು ಹೇರಳವಾಗಿವೆ ಎಂದು ಮೂಲಗಳು ಹೇಳಿವೆ.

ಅರ್ಜೆಂಟೀನ ತಂಡವು ಕೇರಳಕ್ಕೆ ಭೇಟಿ ನೀಡುವ ವಿಚಾರದಲ್ಲಿ ಈ ಮೊದಲು ಗೊಂದಲಗಳಿದ್ದವು. ಮೆಸ್ಸಿಯನ್ನು ಒಳಗೊಂಡ ಅರ್ಜೆಂಟೀನ ಫುಟ್ಬಾಲ್ ತಂಡವು ಕೇರಳಕ್ಕೆ ಬರುವುದಿಲ್ಲ ಎಂಬುದಾಗಿ ಆಗಸ್ಟ್ ಆದಿ ಭಾಗದಲ್ಲಿ ಕೆಲವು ವರದಿಗಳು ಹೇಳಿದ್ದವು. ಆದರೆ, ಫುಟ್ಬಾಲ್ ತಂಡವು ನವೆಂಬರ್‌ನಲ್ಲಿ ಕೇರಳಕ್ಕೆ ಆಗಮಿಸುವುದು ಎಂಬುದಾಗಿ ಅದೇ ತಿಂಗಳ ಕೊನೆಯಲ್ಲಿ ರಾಜ್ಯದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News