ಎಫ್‌ಐಎಚ್ ಪುರುಷರ ಪ್ರೊ ಲೀಗ್| ಭಾರತದ ಸಂಭಾವ್ಯ ಹಾಕಿ ತಂಡ ಪ್ರಕಟ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ.29: ಒಡಿಶಾದ ರೂರ್ಕೆಲಾದಲ್ಲಿ ಫೆ.1ರಿಂದ 7ರ ತನಕ ನಡೆಯಲಿರುವ ಹಿರಿಯ ಪುರುಷರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಹಾಕಿ ಇಂಡಿಯಾವು ಗುರುವಾರ 33 ಸದಸ್ಯರನ್ನು ಒಳಗೊಂಡ ಸಂಭಾವ್ಯ ತಂಡವನ್ನು ಪ್ರಕಟಿಸಿದೆ.
ರೂರ್ಕೆಲಾದಲ್ಲಿ ಫೆ.10ರಿಂದ 15ರ ತನಕ ನಡೆಯಲಿರುವ ಎಫ್‌ಐಎಚ್ ಪುರುಷರ ಪ್ರೊ ಲೀಗ್‌ನ ಮೊದಲ ಹಂತಕ್ಕಾಗಿ ತಂಡದ ತಯಾರಿಯ ಭಾಗವಾಗಿ ಈ ಶಿಬಿರವನ್ನು ಏರ್ಪಡಿಸಲಾಗಿದೆ.
ಭಾರತದ ಸಂಭಾವ್ಯ ಹಾಕಿ ತಂಡ
ಗೋಲ್‌ಕೀಪರ್‌ಗಳು: ಪವನ್, ಸೂರಜ್ ಕರ್ಕೇರ, ಎಂ.ಎಚ್. ಶಶಿಕುಮಾರ್, ಪ್ರಿನ್ಸ್‌ದೀಪ್ ಸಿಂಗ್
ಡಿಫೆಂಡರ್‌ಗಳು: ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಹರ್ಮನ್‌ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಸುಮಿತ್, ಪಿ.ಸಿ.ಬೋಬಿ, ಯಶದೀಪ್ ಸಿವಾಚ್, ನೀಲಂ ಸಂದೀಪ್, ಅಮನ್‌ದೀಪ್ ಲಾಕ್ರಾ.
ಮಿಡ್ ಫೀಲ್ಡರ್‌ಗಳು: ರಾಜೀಂದರ್ ಸಿಂಗ್, ಮನ್‌ಮೀತ್ ಸಿಂಗ್, ಹಾರ್ದಿಕ್ ಸಿಂಗ್, ರಬಿಚಂದ್ರ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ವಿಷ್ಣು ಕಾಂತ್ ಸಿಂಗ್, ರಾಜಕುಮಾರ್ ಪಾಲ್, ನೀಲಕಂಠ ಶರ್ಮಾ, ರೋಶನ್ ಕುಜೂರ್.
ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಶೀಲಾನಂದ ಲಾಕ್ರಾ, ಮನ್‌ದೀಪ್ ಸಿಂಗ್, ಅರೈಜೀತ್ ಸಿಂಗ್, ಅಂಗದ್‌ಬೀರ್ ಸಿಂಗ್, ಉತ್ತಮ್ ಸಿಂಗ್, ಸೆಲ್ವಂ ಕಾರ್ತಿ, ಆದಿತ್ಯ ಅರ್ಜುನ್, ಮಣಿಂದರ್ ಸಿಂಗ್.