ರಣಜಿ ಟ್ರೋಫಿ| ಸಿರಾಜ್‌ಗೆ ನಾಲ್ಕು ವಿಕೆಟ್, ಛತ್ತೀಸ್‌ಗಡ 283 ರನ್‌ಗೆ ಆಲೌಟ್
ಮುಹಮ್ಮದ್ ಸಿರಾಜ್ | Photo Credit : ANI
ಹೈದರಾಬಾದ್, ಜ.29: ಅನುಭವಿ ವೇಗದ ಬೌಲರ್ ಮುಹಮ್ಮದ್ ಸಿರಾಜ್(4-56) ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿದ ಛತ್ತೀಸ್‌ಗಡ ತಂಡವು ರಣಜಿ ಟ್ರೋಫಿಯ ‘ಡಿ’ಗುಂಪಿನ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 283 ರನ್ ಗಳಿಸಿ ಆಲೌಟಾಗಿದೆ.
ಸಿರಾಜ್ ಅವರು ವಿಕಲ್ಪ ತಿವಾರಿ(94 ರನ್)ಸಹಿತ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು.
ಪ್ರತೀಕ್ ಯಾದವ್(106 ರನ್, 99 ಎಸೆತ)ಮಧ್ಯಮ ಸರದಿಯಲ್ಲಿ ಶತಕ ಸಿಡಿಸಿ ಛತ್ತೀಸ್‌ಗಡದ ಮೊತ್ತವನ್ನು 283ಕ್ಕೆ ತಲುಪಿಸಿದರು.
ಹೈದರಾಬಾದ್ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 56 ರನ್ ಗಳಿಸಿದೆ. ಅಮನ್ ರಾವ್(32 ರನ್)ಹಾಗೂ ಅಭಿರತ್ ರೆಡ್ಡಿ(23 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿರುವ ಹೈದರಾಬಾದ್ ತಂಡವು ನಾಕೌಟ್ ಸ್ಪರ್ಧೆಯಿಂದ ಹೊರಬಿದ್ದಿದೆ. ‘ಡಿ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಛತ್ತೀಸ್‌ಗಢ ಮುಂದಿನ ಸುತ್ತಿಗೇರುವ ಅಲ್ಪ ಅವಕಾಶ ಸಿಗಬೇಕಾದರೆ ಬೋನಸ್ ಅಂಕದೊಂದಿಗೆ ಜಯ ಸಾಧಿಸಬೇಕಾಗಿದೆ.