×
Ad

FIH ಪ್ರೋ ಲೀಗ್ ಹಾಕಿ | ಸಂಭವನೀಯರ ಪಟ್ಟಿಯಿಂದ ಮನ್ ಪ್ರೀತ್ ಹೊರಕ್ಕೆ; ಅಶಿಸ್ತು ಕಾರಣ?

Update: 2026-01-30 18:01 IST

ಮನ್ ಪ್ರೀತ್ | Photo Credit : PTI 

ಹೊಸದಿಲ್ಲಿ: ಡಿಸೆಂಬರ್ ತಿಂಗಳಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ತೋರಿದ ಅಶಿಸ್ತಿನ ಕಾರಣಕ್ಕೆ ಮುಂಬರುವ FIH ಪ್ರೊ ಲೀಗ್‌ನ ಸಂಭವನೀಯರ ಪಟ್ಟಿಯಿಂದ ಮಾಜಿ ನಾಯಕ ಹಾಗೂ ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಸೇರಿದಂತೆ ಹಿರಿಯ ಆಟಗಾರರನ್ನು ಭಾರತ ತಂಡದ ಸಂಭವನೀಯರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

PTI ಸುದ್ದಿ ಸಂಸ್ಥೆಯ ವರದಿ ಪ್ರಕಾರ, ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಂಭೀರ ಅಶಿಸ್ತು ತೋರಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗುರುವಾರ ಪ್ರಕಟಿಸಲಾಗಿರುವ ಸಂಭವನೀಯರ ಪಟ್ಟಿಯಿಂದ ಮನ್ ಪ್ರೀತ್ ಸಿಂಗ್, ದಿಲ್ ಪ್ರೀತ್ ಸಿಂಗ್ ಹಾಗೂ ಗೋಲ್ ಕೀಪರ್ ಕೃಷನ್ ಬಹದ್ದೂರ್ ಪಾಠಕ್‌ರನ್ನು ಕೈಬಿಡಲಾಗಿದೆ. ಡಿಸೆಂಬರ್ 2ರಿಂದ 16ರವರೆಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ, ಮೂರನೆಯ ಪಂದ್ಯದಲ್ಲಿ ಡ್ರಾ ಮಾಡಿಕೊಂಡು, 0-2ರ ಅಂತರದಲ್ಲಿ ಆತಿಥೇಯ ದಕ್ಷಿಣ ಅಫ್ರಿಕಾ ತಂಡದೆದುರು ಪರಾಭವಗೊಂಡಿತ್ತು.

"ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಂಭೀರ ಆಶಿಸ್ತು ವರ್ತನೆ ಬೆಳಕಿಗೆ ಬಂದಿದ್ದು, ಈ ವರ್ತನೆಯಲ್ಲಿ ಭಾಗಿಯಾಗಿದ್ದ ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ. ತಮ್ಮ ತಂಡದ ಸಹ ಆಟಗಾರನಿಗೆ ನಿಷೇಧಗೊಂಡಿರುವ ವಸ್ತುವನ್ನು ನೀಡಿದ್ದಕ್ಕಾಗಿ ಈ ಆಟಗಾರರು ಬಳಿಕ ಕ್ಷಮೆ ಯಾಚಿಸಿದ್ದಾರಾದರೂ, ತಂಡದ ಸಭೆಯ ವೇಳೆ ಈ ಆಟಗಾರರನ್ನು ಮುಂಬರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ತಂಡದಿಂದ ಹೊರಗಿಡುವ ನಿರ್ಣಯವನ್ನು ಕೈಗೊಳ್ಳಲಾಯಿತು" ಎಂದು ಮೂಲಗಳು ತಿಳಿಸಿವೆ.

ಸದ್ಯ ಪ್ರಕಟಗೊಂಡಿರುವ ಭಾರತ ತಂಡದಲ್ಲಿ 33 ವರ್ಷದ ಅತ್ಯಂತ ಅನುಭವಿ ಆಟಗಾರ ಮನ್ ಪ್ರೀತ್ ಸಿಂಗ್ ಹೆಸರಿಲ್ಲದಿರುವುದು ಹಾಕಿ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ ನಡೆದ ಇಂಡಿಯಾ ಹಾಕಿ ಲೀಗ್‌ನಲ್ಲಿ ರಾಂಚಿ ರಾಯಲ್ಸ್ ತಂಡದ ಸಹ ನಾಯಕರಾಗಿದ್ದ ಮನ್ ಪ್ರೀತ್ ಸಿಂಗ್ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News