×
Ad

ಏಶ್ಯಕಪ್: ಭಾರತ ಆಡುವ ಮೊದಲೆರಡು ಪಂದ್ಯಗಳಿಗೆ ಕೆ.ಎಲ್.ರಾಹುಲ್ ಅಲಭ್ಯ

Update: 2023-08-29 16:49 IST

Photo: PTI

ಹೊಸದಿಲ್ಲಿ: ಕಳೆದ ವಾರ ಏಶ್ಯಕಪ್ ತಂಡಕ್ಕೆ ಆಯ್ಕೆಯಾಗಿರುವ ಕೆ.ಎಲ್. ರಾಹುಲ್ ಅವರ ಫಿಟ್ನೆಸ್ ಸ್ಥಿತಿಗತಿಯ ಕುರಿತ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಹೇಳಿಕೆಯನ್ನು ಬಿಸಿಸಿಐ ತನ್ನ ಅಧಿಕೃತ ಹ್ಯಾಂಡಲ್ ನಲ್ಲಿ ಮಂಗಳವಾರ ಟ್ವೀಟ್ ಮಾಡಿದೆ.

ಏಶ್ಯಕಪ್ ಬುಧವಾರದಿಂದ ಆರಂಭವಾಗಲಿದೆ.

ಕೆ.ಎಲ್. ರಾಹುಲ್ ನಿಜವಾಗಿಯೂ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಭಾರತ ಏಶ್ಯಕಪ್ ನಲ್ಲಿ ಆಡಲಿರುವ ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ಹೇಳಿದ್ದಾಗಿ ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್ ಅವರು ರೋಹಿತ್ ಶರ್ಮಾ ನೇತೃತ್ವದ 17 ಸದಸ್ಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆರು ದೇಶಗಳು ಭಾಗವಹಿಸುವ ಏಶ್ಯಕಪ್ ಟೂರ್ನಿ ಈ ಬಾರಿ ಶ್ರೀಲಂಕಾ ಹಾಗೂ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ.

ಈ ವರ್ಷದ ಐಪಿಎಲ್ ನಲ್ಲಿ ಗಾಯಗೊಂಡ ನಂತರ ರಾಹುಲ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟನ್ನು ಆಡಿಲ್ಲ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News