ಏಶ್ಯಕಪ್ ಸೂಪರ್-4 ಪಂದ್ಯ: ಬಾಂಗ್ಲಾದೇಶ ವಿರುದ್ಧ ಫೀಲ್ಡಿಂಗ್ ಆಯ್ದುಕೊಂಡ ಭಾರತ
Update: 2023-09-15 15:06 IST
Twitter@BCCI
ಕೊಲಂಬೊ: ಏಶ್ಯಕಪ್ ಸೂಪರ್-4 ಪಂದ್ಯದಲ್ಲಿ ಶುಕ್ರವಾರ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಅವರು ಬಾಂಗ್ಲಾದೇಶ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ತಿಲಕ್ ವರ್ಮಾ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ತಿಲಕ್ ಅವರು ಭಾರತದ ನಾಯಕ ರೋಹಿತ್ ಶರ್ಮಾ ಅವರಿಂದ ಏಕದಿನ ಕ್ಯಾಪ್ ಸ್ವೀಕರಿಸಿದರು.
ಬಾಂಗ್ಲಾ ವಿರುದ್ಧ ಪಂದ್ಯಕ್ಕೆ ಆಡುವ ಬಳಗದಲ್ಲಿ ಭಾರತವು 5 ಬದಲಾವಣೆ ಮಾಡಿದೆ.ವೇಗದ ಬೌಲರ್ ಗಳಾದ ಮುಹಮ್ಮದ್ ಶಮಿ ಹಾಗೂ ಪ್ರಸಿದ್ದ ಕೃಷ್ಣ. ಶಾರ್ದೂಲ್ ಠಾಕೂರ್ ಹಾಗೂ ಸೂರ್ಯಕುಮಾರ್ ಯಾದವ್ ಆಡುವ ಬಳಗವನ್ನು ಸೇರಿದ್ದಾರೆ.
ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ, ಮುಹಮ್ಮದ್ ಸಿರಾಜ್, ಜಸ್ ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ವಿಶ್ರಾಂತಿ ಪಡೆದಿದ್ದಾರೆ.
ಟೂರ್ನಿಯಲ್ಲಿ ಈಗಾಗಲೇ ಫೈನಲ್ ಗೆ ತಲುಪಿರುವ ಭಾರತಕ್ಕೆ ಈ ಪಂದ್ಯ ಪ್ರತಿಷ್ಠೆಯಾಗಿದೆ.