ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂಡಿ Photo: x.com/ITGDsports

ಹೊಸದಿಲ್ಲಿ: ಜಪಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಶುಕ್ರವಾರ ಭಾರತೀಯ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು. ಪ್ಯಾರಾ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂಡಿ ಜೋಡಿ ಭಾರತಕ್ಕೆ ಸಂಭ್ರಮ ತಂದರೆ, ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ನಿತೇಶ್ ಕುಮಾರ್ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಪುರುಷರ ಸಿಂಗಲ್ಸ್ SL3 ವಿಭಾಗದ ಫೈನಲ್‌ನಲ್ಲಿ ದೇಶದವರೇ ಆದ ಪ್ರಮೋದ್ ಭಗತ್ ಅವರನ್ನು ಸೋಲಿಸಿದ ನಿತೇಶ್ ಚಿನ್ನ ಗೆದ್ದರು. ಪ್ರಮೋದ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಪುರುಷರ ಡಬಲ್ಸ್ ರಿಕರ್ವ್ ವಿಭಾಗದ ಫೈನಲ್‌ನಲ್ಲಿ ಭಾರತದ ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂಡಿ ಜೋಡಿ ಚೀನಾ ತಂಡವನ್ನು 5-1 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಮೊದಲ ಸೆಟ್‌ನಲ್ಲಿ ಉಭಯ ತಂಡಗಳು 35-35 ಅಂಕಗಳೊಂದಿಗೆ ಸಮಬಲ ಸಾಧಿಸಿದವು. ಬಳಿಕದ ಎರಡು ಸೆಟ್‌ಗಳಲ್ಲಿ 37-36 ಮತ್ತು 38-36 ಅಂಕಗಳಿಂದ ಮೇಲುಗೈ ಸಾಧಿಸಿದ ಭಾರತೀಯ ಜೋಡಿ, ಈ ದಿನ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿತು.

ಪುರುಷರ ಸಿಂಗಲ್ಸ್ SL3 ವಿಭಾಗದ ಫೈನಲ್‌ನಲ್ಲಿ ನಿತೇಶ್ ಕುಮಾರ್ ಅವರು ಪ್ರಮೋದ್ ಭಗತ್ ಅವರನ್ನು 21-18, 21-16 ಅಂತರದ ನೇರ ಗೇಮ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ನಿತೇಶ್ ಚಿನ್ನದ ಪದಕ ಗೆದ್ದರೆ, ಪ್ರಮೋದ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಭಾರತ ಈ ವಿಭಾಗದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor