Photo Credit : PTI

ನಗೋಯ: ಭಾರತದ ಓಟಗಾರ ಸಂದೀಪ್ ಹಾಗೂ ಜಾವೆಲಿನ್ ಎಸೆತಗಾರ ಹನಿ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.

ಸಂದೀಪ್ ಶುಕ್ರವಾರ ನಡೆದ ಪುರುಷರ 400 ಮೀ. ಟಿ64 ಸ್ಪರ್ಧೆಯಲ್ಲಿ 52.28 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ 400 ಮೀ. ಟಿ64 ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆದರು. ಭಾರತದ ಇನ್ನೋರ್ವ ಓಟಗಾರ ಅಜಯ್ ಕುಮಾರ್(53.61)ಕಂಚಿನ ಪದಕ ಜಯಿಸಿದರು. ಸೌದಿ ಅರೇಬಿಯದ ನೌರ್ ಅಲ್ಸಾನಾ(53.13)ಬೆಳ್ಳಿ ಜಯಿಸಿದರು.

ಭಾರತದ ಹನಿ ಪುರುಷರ ಜಾವೆಲಿನ್ ಥ್ರೋ ಎಫ್‌37-38 ಸ್ಪರ್ಧೆಯನ್ನು ವಿಶ್ವ ದಾಖಲೆಯೊಂದನ್ನು ಮುರಿದು ಚಿನ್ನದ ಪದಕಕ್ಕೆ ಮುತ್ತಿಟ್ಟರು.

60.49 ಮೀ. ದೂರ ಜಾವೆಲಿನ್ ಎಸೆದಿರುವ ಹನಿ 1,116 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಇರಾನ್‌ನ ಹೊರ್ಮೊಝ್ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(50.68 ಮೀ.)ದೊಂದಿಗೆ ಬೆಳ್ಳಿ ಜಯಿಸಿದರೆ, ಚೀನಾದ ಯು ಚೆಂಗ್‌ಜೀ(53.66 ಮೀ.)ಕಂಚಿನ ಪದಕ ಜಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor