×
Ad

ಎಟಿಪಿ ರ‍್ಯಾಂಕಿಂಗ್‌: ಅಲ್ಕರಾಝ್, ಜೊಕೊವಿಕ್ ಗೆ ಭಡ್ತಿ

Update: 2025-06-09 22:32 IST

ಅಲ್ಕರಾಝ್, ಜೊಕೊವಿಕ್ | PC : X  

ಪ್ಯಾರಿಸ್: ಫ್ರೆಂಚ್ ಓಪನ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಕಾರ್ಲೊಸ್ ಅಲ್ಕರಾಝ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರನ್ನರ್ಸ್ ಅಪ್ ಜನ್ನಿಕ್ ಸಿನ್ನರ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ಇದೇ ವೇಳೆ, ಜಾಕ್ ಡ್ರ್ಯಾಪರ್ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. 3 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ನೊವಾಕ್ ಜೊಕೊವಿಕ್ 5ನೇ ಸ್ಥಾನಕ್ಕೇರಿದ್ದಾರೆ.

ಎಟಿಪಿ ರ್ಯಾಂಕಿಂಗ್ಸ್: ಟಾಪ್-10

1. ಜನ್ನಿಕ್ ಸಿನ್ನರ್(ಇಟಲಿ)

2. ಕಾರ್ಲೊಸ್ ಅಲ್ಕರಾಝ್(ಸ್ಪೇನ್)

3. ಅಲೆಕ್ಸಾಂಡರ್ ಝ್ವೆರೆವ್ (ಜರ್ಮನಿ)

4. ಜಾಕ್ ಡ್ರೇಪರ್(ಬ್ರಿಟನ್)

5. ನೊವಾಕ್ ಜೊಕೊವಿಕ್(ಸರ್ಬಿಯ)

6. ಟೇಲರ್ ಫ್ರಿಟ್ಝ್(ಅಮೆರಿಕ)

7. ಲೊರೆಂರೊ ಮುಸೆಟ್ಟಿ(ಇಟಲಿ)

8. ಟಾಮಿ ಪೌಲ್(ಅಮೆರಿಕ)

9. ಹೋಲ್ಗರ್ ರೂನ್(ಡೆನ್ಮಾರ್ಕ್)

10. ಅಲೆಕ್ಸ್ ಡಿ ಮಿನೌರ್(ಆಸ್ಟ್ರೇಲಿಯ)

ಫ್ರೆಂಚ್ ಓಪನ್ ವಿನ್ನರ್ ಗೌಫ್‌ಗೆ 2ನೇ ಸ್ಥಾನ:

ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ಫೈನಲ್‌ನಲ್ಲಿ ಸೋಲಿಸಿ 2025ರ ಆವೃತ್ತಿಯ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ನಂತರ ಅಮೆರಿಕದ ಕೊಕೊ ಗೌಫ್ ಅವರು ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮತ್ತೊಂದೆಡೆ ಸಬಲೆಂಕಾ ಅವರು ವಿಶ್ವದ ನಂ.1 ಆಟಗಾರ್ತಿಯಾಗಿ ಮುಂದುವರಿದಿದ್ದಾರೆ.

ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್ ತನಕ ತಲುಪಿದ್ದ ಫ್ರಾನ್ಸ್‌ನ ಲೊಯಿಸ್ ಬಾಯಿಸನ್ 296 ಸ್ಥಾನಗಳ ಏರಿಕೆ ಕಂಡು ಜೀವನಶ್ರೇಷ್ಠ 65ನೇ ರ್ಯಾಂಕಿಗೆ ತಲುಪಿದ್ದಾರೆ. ವೈಲ್ಡ್‌ಕಾರ್ಡ್ ಮೂಲಕ ಫ್ರೆಂಚ್ ಓಪನ್ ಟೂರ್ನಿ ಪ್ರವೇಶಿಸಿದ್ದ ಬಾಯಿಸನ್ ಅವರು ಸೆಮಿ ಫೈನಲ್‌ನಲ್ಲಿ ಗೌಫ್‌ಗೆ ಸೋತಿದ್ದರು. ಅಂತಿಮವಾಗಿ ಗೌಫ್ ಟೂರ್ನಿಯ ಚಾಂಪಿಯನ್ ಆದರು.

ಡಬ್ಲ್ಯುಟಿಎ ರ್ಯಾಂಕಿಂಗ್: ಟಾಪ್-10

1.ಆರ್ಯನಾ ಸಬಲೆಂಕಾ

2.ಕೊಕೊ ಗೌಫ್(ಅಮೆರಿಕ)

3. ಜೆಸ್ಸಿಕಾ ಪೆಗುಲಾ(ಅಮೆರಿಕ)

4. ಜಾಸ್ಮಿನ್ ಪಯೋಲಿನಿ(ಇಟಲಿ)

5. ಝೆಂಗ್ ಕ್ವಿನ್‌ವೆನ್(ಚೀನಾ)

6. ಮಿರ್ರಾ ಆಂಡ್ರೀವಾ

7. ಇಗಾ ಸ್ವಿಯಾಟೆಕ್(ಪೋಲ್ಯಾಂಡ್)

8. ಮ್ಯಾಡಿಸನ್ ಕೀಸ್(ಅಮೆರಿಕ)

9. ಪೌಲಾ ಬಡೋಸಾ(ಸ್ಪೇನ್)

10. ಎಮ್ಮಾ ನವಾರ್ರೊ(ಅಮೆರಿಕ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News