×
Ad

ಆಸ್ಟ್ರೇಲಿಯಾ 163ಕ್ಕೆ ಆಲೌಟ್: ಹಾರಿಸ್ ರವೂಫ್ ಗೆ ಐದು ವಿಕೆಟ್ ಗಳ ಗೊಂಚಲು

Update: 2024-11-08 17:47 IST

 ಹಾರಿಸ್ ರವೂಫ್  | PC : ANI 

ಅಡಿಲೇಡ್: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡನೆ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹಾರಿಸ್ ರವೂಫ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಕೇವಲ 163 ರನ್ ಗಳಿಗೆ ಆಲೌಟ್ ಆಗಿದೆ. 29 ರನ್ ನೀಡಿ 5 ವಿಕೆಟ್ ಕಬಳಿಸಿದ ಹಾರಿಸ್, ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಎರಡನೆ ಐದು ವಿಕೆಟ್ ಗೊಂಚಲು ಗಳಿಸಿದ ಸಾಧನೆ ಮಾಡಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡವು, ಹಾರಿಸ್ ರ ಬಿಗಿ ಬೌಲಿಂಗ್ ಗೆ ತತ್ತರಿಸಿ ಹೋಯಿತು. ಹಾರಿಸ್, ತಮ್ಮ ವೇಗ ಮತ್ತು ಬೌನ್ಸ್ ಮೂಲಕ ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಕಂಗೆಡಿಸಿದರು. ಬಾಲ್ ತಿರುವು ಪಡೆಯುತ್ತಿದ್ದುದರಿಂದ, ಆಸ್ಟ್ರೇಲಿಯಾ ಬ್ಯಾಟರ್ ಗಳು ಹಾರಿಸ್ ಎದುರು ಪರದಾಡಿದರು. ಕೇವಲ ‍ಸ್ಟೀವ್ ಸ್ಮಿತ್ ಮಾತ್ರ 35 ರನ್ ಗಳಿಸಿ, ತಂಡಕ್ಕೆ ಕೊಂಚ ಆಸರೆಯಾದರು. ಸ್ಟೀವ್ ಸ್ಮಿತ್ ಹೊರತುಪಡಿಸಿ ಮತ್ಯಾವ ಆಸ್ಟ್ರೇಲಿಯಾ ಬ್ಯಾಟರ್ ಕೂಡಾ 20 ರನ್ ಗಳ ಗಡಿ ದಾಟಲಿಲ್ಲ.

ಹಾರಿಸ್ ರೌಫ್ ಗೆ ಉತ್ತಮ ಜೊತೆ ನೀಡಿದ ಶಹೀನ್ ಅಫ್ರಿದಿ, 26 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News