ಭಾರತಕ್ಕೆ ಆರಂಭಿಕ ಆಘಾತ ನೀಡಿದ ಆಸ್ಟ್ರೇಲಿಯಾ
Photo: X
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ನ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 200 ರನ್ ಗಳ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಅನುಭವಿಸಿದೆ.
ಇಂದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ನಲ್ಲಿ ಬಾರತವನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಮೊದಲೇ ಓವರ್ ನಲ್ಲಿ ಭಾರತ ತಂಡ 2 ರನ್ ಗಳಿಸಿದ್ದಾಗ ಬೌಲರ್ ಮಿಷೆಲ್ ಸ್ಟಾರ್ಕ್ ಅವರ ಎಸೆತಕ್ಕೆ ಇಶಾನ್ ಕಿಶನ್ ಕ್ಯಾಮರೂನ್ ಗ್ರೀನ್ ಗೆ ಕ್ಯಾಚಿತ್ತು ಸೊನ್ನೆ ಸುತ್ತಿದರು.
ಶುಭ ಮನ್ ಗಿಲ್ ಬದಲಿಗೆ ಬಂದಿದ್ದ ಎರಡನೇ ಕ್ರಮಾಂಕದ ಆಟಗಾರ ಇಶಾನ್ ಕಿಶನ್ ಔಟ್ ಆದಾಗ ತಂಡ ಆಘಾತ ಅನುಭವಿಸಿತು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಜೊತೆ ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದ ನಾಯಕ ರೋಹಿತ್ ಶರ್ಮಾ 1.3 ಓವರ್ ನಲ್ಲಿ ಜೋಶ್ ಹೇಝಲ್ ವುಡ್ ಎಸೆತ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದು ಶೂನ್ಯಕ್ಕೆ ಔಟ್ ಆದರು. ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ ಜೋಶ್ ಹೇಝವುಡ್ ಅವರ ಓವರ್ ನ ಕೊನೆಯ ಮೂರು ಎಸೆತ ಎದುರಿಸಿ ಸ್ಕ್ವೇರ್ ಡ್ರೈವ್ ಮಾಡಲು ಹೋಗಿ ಡೇವಿಡ್ ವಾರ್ನರ್ ಅವರಿಗೆ ಕ್ಯಾಚಿತ್ತು ಸೊನ್ನೆ ಸುತ್ತಿದರು. ಈ ಮೂಲಕ ಭಾರತದ ಮೂರು ಪ್ರಮುಖ ಬ್ಯಾಟರ್ ಗಳು ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸಿದ ಜೋಶ್ ಹೇಝಲ್ ವುಡ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಒಂದು ಹಂತದಲ್ಲಿ2 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ತೀವ್ರ ಒತ್ತಡಕ್ಕೆ ಸಿಲುಕಿತ್ತು. ವಿರಾಟ್ ಕೊಹ್ಲಿ ಯ ತಾಳ್ಮೆಯ ಆಟ ಭಾರತ ತಂಡಕ್ಕೆ ಭರವಸೆಯ ಮಿಂಚು ಮೂಡಿಸಿದೆ. ಪಂದ್ಯ ಗೆಲ್ಲಲು ಭಾರತಕ್ಕೆ 41ಓವರ್ ಗಳಲ್ಲಿ 174 ರನ್ ಗಳ ಅವಶ್ಯಕತೆಯಿದೆ. ಕೊಹ್ಲಿ ಜೊತೆ ಕೆ ಎಲ್ ರಾಹುಲ್ ಕ್ರೀಸ್ ನಲ್ಲಿದ್ದಾರೆ.