×
Ad

ಮಿಂಚಿದ ಹೆಡ್, ಝಂಪಾ: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ

Update: 2024-09-12 08:07 IST

PC: x.com/Berzabb

ಇಂಗ್ಲೆಂಡ್ ತಂಡವನ್ನು 28 ರನ್ ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 179 ರನ್ ಗಳಿಗೆ ಆಲೌಟ್ ಆಗಿತ್ತು. ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿ ಕೇವಲ 23 ಎಸೆತಗಳಲ್ಲಿ 59 ರನ್ ಸಿಡಿಸಿದ್ದ ಟ್ರಾವಿಸ್ ಹೆಡ್ ಗೆಲುವಿನ ರೂವಾರಿ ಎನಿಸಿದರು. ಇಂಗ್ಲೆಂಡ್ ಸ್ಪಿನ್ನರ್ ಗಳಾದ ಲಿಯಮ್ ಲಿಂಗ್ವಿಸ್ಟನ್ ಹಾಗೂ ಅದಿಲ್ ರಶೀದ್ ಕ್ರಮವಾಗಿ ಮೂರು ಹಾಗೂ ಒಂದು ವಿಕೆಟ್ ಪಡೆದು ಮಧ್ಯದ ಓವರ್ ಗಳನ್ನು ಆಸ್ಟ್ರೇಲಿಯಾದ ರನ್ ಧಾವಂತಕ್ಕೆ ಕಡಿವಾಣ ಹಾಕಿದರು.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಮೊದಲ ಎಂಟು ಓವರ್ ಗಳಲ್ಲಿ 52 ರನ್ ಗಳಾಗುಷ್ಟರಲ್ಲಿ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೇವಲ 20 ರನ್ ಗಳಿಗೆ ಎರಡು ವಿಕೆಟ್ ಕಿತ್ತ ಆಡಂ ಝಂಪಾ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದು ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಿದರು. ಜೋಶ್ ಹ್ಯಾಸಲ್ ವುಡ್ 32 ರನ್ ಗಳಿಗೆ 2 ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು.

ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್ ಸ್ಟನ್ 37 ರನ್ ಗಳನ್ನು ಗಳಿಸಿ ಅಗ್ರ ಸ್ಕೋರರ್ ಎನಿಸಿದರು. ಸ್ಯಾಮ್ ಕರನ್ ಜತೆ ಸೇರಿ 54 ರನ್ ಗಳ ಉತ್ತಮ ಜತೆಯಾಟ ನೀಡಿದರೂ, ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂದ ಇಂಗ್ಲೆಂಡ್ 151 ರನ್ ಗಳಿಗೆ ಆಲೌಟ್ ಆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News