×
Ad

ನಾಲ್ಕಕ್ಕೇರಿದ ಆಸ್ಟ್ರೇಲಿಯಾ, ಆರಕ್ಕೇರದ ಭಾರತ

Update: 2024-02-11 21:06 IST

Photo : x/@cricketworldcup

ಬೆನೋನಿ(ದಕ್ಷಿಣ ಆಫ್ರಿಕಾ): ಇಲ್ಲಿನ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ರವಿವಾರ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ ನಲ್ಲಿ ಆಸ್ಟ್ರೇಲಿಯ ತಂಡದೆದುರು ಎದುರು ಭಾರತ ತಂಡ 174 ರನ್ ಗೆ ಆಲೌಟ್ ಆಗಿ, ಸೋಲೊಪ್ಪಿಕೊಂಡಿತು.

ಆಸ್ಟ್ರೇಲಿಯಾ ನೀಡಿದ 253 ರನ್ ಗಳ ಬೆನ್ನತ್ತಿದ ಭಾರತ 174 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 79 ರನ್ ಗಳ ಅಂತರದಿಂದ ಸೋತಿತು. ಈ ಮೂಲಕ 6 ನೇ ಬಾರಿ ಅಂಡರ್ 19 ವಿಶ್ವಕಪ್ ಜಯಿಸುವ ಕನಸು ಭಗ್ನವಾಯಿತು. ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸಿ ನಾಲ್ಕನೇ ಬಾರಿ ಕಿರಿಯರ ವಿಶ್ವಕಪ್ ಜಯಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News