×
Ad

ಭದ್ರತೆಯ ಕುರಿತು ಕಳವಳ: ಪಾಕಿಸ್ತಾನ ಕ್ರಿಕೆಟ್ ಪ್ರವಾಸವನ್ನು ಇನ್ನೂ ನಿರ್ಧರಿಸದ ಬಾಂಗ್ಲಾದೇಶ

Update: 2025-05-11 21:40 IST

Photo Courtesy: PTI

ಢಾಕಾ: ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು ಯುಎಇ ವಿರುದ್ಧದ ನಿಗದಿತ ಟಿ-20 ಸರಣಿಯನ್ನು ಆಡಲಿದೆ ಎಂದು ಖಚಿತಪಡಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ), ಭದ್ರತಾ ಕಳವಳದಿಂದಾಗಿ ಮುಂಬರುವ ಪಾಕಿಸ್ತಾನ ಕ್ರಿಕೆಟ್ ಪ್ರವಾಸವು ಅನಿಶ್ಚಿತತೆಯಲ್ಲಿದೆ ಎಂದಿದೆ.

ಯುಎಇ ತಂಡದ ವಿರುದ್ಧ ಪಂದ್ಯವು ಮೇ 17 ಹಾಗೂ 19ರಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಸ್ಥಳೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಪಾಕಿಸ್ತಾನ ವಿರುದ್ಧ ಮೇ 25ರಿಂದ ಜೂನ್ 3ರ ತನಕ ನಿಗದಿಯಾಗಿರುವ ಐದು ಪಂದ್ಯಗಳ ಟಿ-20 ಸರಣಿಯು ಇನ್ನೂ ಖಚಿತವಾಗಿಲ್ಲ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆಯು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪ್ರಮುಖ ಕಳವಳವಾಗಿದೆ. ಗಡಿ ಉದ್ವಿಗ್ನತೆಯಿಂದಾಗಿ ಈಗಾಗಲೇ ಐಪಿಎಲ್ ಹಾಗೂ ಪಿಎಸ್ಎಲ್ ಟೂರ್ನಮೆಂಟ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶೇರ್-ಇ-ಬಾಂಗ್ಲಾ ನ್ಯಾಶನಲ್ ಸ್ಟೇಡಿಯಮ್ನಲ್ಲಿ ನಡೆದಿರುವ ಸಭೆಯ ವೇಳೆ ಮಂಡಳಿಯ ಸದಸ್ಯರು ಅಪಾಯಗಳ ಕುರಿತಾಗಿ ಅವಲೋಕನ ನಡೆಸಿದರು. ತನ್ನ ಯುಎಇ ಪ್ರವಾಸವನ್ನು ಖಚಿತಪಡಿಸಿರುವ ಬಿಸಿಬಿ, ಪಾಕಿಸ್ತಾನ ಕ್ರಿಕೆಟ್ ಪ್ರವಾಸದ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News