×
Ad

ಐಪಿಎಲ್‌ ಪಿಚ್‌ ಹಿಂದಿನ ತೆರಮರೆಯ ಹೀರೋಗಳಿಗೆ ತಲಾ ರೂ. 25 ಲಕ್ಷ ಘೋಷಿಸಿದ ಬಿಸಿಸಿಐ!

Update: 2024-05-27 18:02 IST
PC : PTI

 ಹೊಸದಿಲ್ಲಿ: ಐಪಿಎಲ್‌ ಪಂದ್ಯಗಳಿಗಾಗಿ ಅತ್ಯುತ್ತಮ ಪಿಚ್‌ಗಳನ್ನು ನೀಡಿದ್ದಕ್ಕಾಗಿ ಐಪಿಎಲ್‌ ಪಂದ್ಯಗಳು ನಡೆದ 10 ಮೈದಾನಗಳ ತೆರೆಮರೆಯ ಹೀರೋಗಳಾದ ಗ್ರೌಂಡ್ಸ್‌ಮೆನ್‌ ಮತ್ತು ಕ್ಯುರೇಟರ್‌ಗಳಿಗೆ ತಲಾ ರೂ 25 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಕಷ್ಟಕರ ಹವಾಮಾನ ಪರಿಸ್ಥಿತಿಗಳಲ್ಲೂ ಅತ್ಯುತ್ತಮ ಪಿಚ್‌ಗಳನ್ನು ಒದಗಿಸಲು ಅವಿರತವಾಗಿ ಶ್ರಮಿಸಿದ ಗ್ರೌಂಡ್‌ ಸಿಬ್ಬಂದಿ ತೆರೆಮರೆಯ  ಹೀರೋಗಳು ಎಂದು ಜಯ್‌ ಶಾ ಟ್ವೀಟ್‌ ಮಾಡಿದ್ದಾರೆ.

ಐಪಿಎಲ್‌ ಪಂದ್ಯಗಳು ನಿಯಮಿತವಾಗಿ ನಡೆಯುವ 10 ಮೈದಾನಗಳ ಗ್ರೌಂಡ್ಸ್‌ಮೆನ್‌ ಮತ್ತು ಕ್ಯುರೇಟರ್‌ಗಳಿಗೆ ತಲಾ ರೂ 25 ಲಕ್ಷ ಹಾಗೂ ಹೆಚ್ಚುವರಿ 3 ಮೈದಾನಗಳ ಗ್ರೌಂಡ್ಸ್‌ಮೆನ್‌ ಮತ್ತು ಕ್ಯುರೇಟರ್‌ಗಳಿಗೆ ತಲಾ ರೂ 10 ಲಕ್ಷ ನೀಡಲಾಗುವುದು. ನಿಮ್ಮೆಲ್ಲರ ಬದ್ಧತೆ ಮತ್ತು ಶ್ರಮಕ್ಕಾಗಿ ಧನ್ಯವಾದಗಳು” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಐಪಿಎಲ್‌ ಪಂದ್ಯಗಳು ನಿಯಮಿತವಾಗಿ ಮುಂಬೈ, ದಿಲ್ಲಿ, ಚೆನ್ನೈ, ಕೊಲ್ಕತ್ತಾ, ಚಂಡೀಗಢ, ಹೈದರಾಬಾದ್‌, ಬೆಂಗಳೂರು, ಲಕ್ನೋ, ಅಹ್ಮದಾಬಾದ್‌ ಮತ್ತು ಜೈಪುರದಲ್ಲಿ ನಡೆಯುತ್ತವೆ. ಇವುಗಳ ಹೊರತಾಗಿ ಈ ವರ್ಷ ಗುವಾಹಟಿ, ವಿಶಾಖಪಟ್ಟಣಂ ಮತ್ತು ಧರಂಶಾಲಾದಲ್ಲೂ ಪಂದ್ಯಗಳು ನಡೆದಿವೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News