×
Ad

ಬ್ರೆಝಿಲಿಯನ್ ಸೂಪರ್ ಸ್ಟಾರ್ ನೇಮರ್ ಭಾರತದಲ್ಲಿ ಮೊದಲ ಬಾರಿ ಅಧಿಕೃತ ಪಂದ್ಯ ಆಡುವ ಸಾಧ್ಯತೆ

Update: 2023-08-24 14:57 IST

Photo: Twitter

ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ತಂಡ ಮುಂಬೈ ಸಿಟಿ ಫುಟ್ಬಾಲ್ ಕ್ಲಬ್ ಎಎಫ್ ಸಿ ಚಾಂಪಿಯನ್ಸ್ ಲೀಗ್ ವೆಸ್ಟ್ ನ ಇತ್ತೀಚಿನ ಡ್ರಾದಲ್ಲಿ ಅಲ್-ಹಿಲಾಲ್ ತಂಡವಿರುವ ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬ್ರೆಝಿಲಿಯನ್ ಸೂಪರ್ ಸ್ಟಾರ್ ನೇಮರ್ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಭಾರತದಲ್ಲಿ ಅಧಿಕೃತ ಪಂದ್ಯವನ್ನು ಆಡುವ ಸಾಧ್ಯತೆಯಿದೆ.

ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ಲಬ್ ಆಗಿರುವ ಅಲ್-ಹಿಲಾಲ್, ನೇಮರ್, ರುಬೆನ್ ನೆವೆಸ್, ಕಾಲಿಡೌ ಕೌಲಿಬಾಲಿ, ಸೆರ್ಗೆಜ್ ಮಿಲಿಂಕೋವಿಕ್-ಸಾವಿಕ್, ಮುಂತಾದವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಡಿ ಗುಂಪಿನಲ್ಲಿರುವ ಇತರ ಎರಡು ತಂಡಗಳೆಂದರೆ: ಇರಾನ್ ನ ಎಫ್ ಸಿ ನಸ್ಸಾಜಿ ಮಝಾಂದರನ್ ಮತ್ತು ಉಜ್ಬೇಕಿಸ್ತಾನ್ನ ಪಿಎಫ್ಸಿ ನವಬಹೋರ್ ನಮಂಗನ್.

ಮಾಜಿ ಬಾರ್ಸಿಲೋನಾ ತಾರೆ ನೇಮರ್ ರನ್ನು ಕಳೆದ ವಾರ ರಿಯಾದ್ ನಲ್ಲಿ ಸಾವಿರಾರು ಅಭಿಮಾನಿಗಳು ಸ್ವಾಗತಿಸಿದರು.

ನೇಮರ್ ಶನಿವಾರದ ಅಲ್-ಫೈಹಾ ವಿರುದ್ಧ ಅಲ್ ಹಿಲಾಲ್ ಆಡಿರುವ ಪಂದ್ಯದಿಂದ ಹೊರಗುಳಿದಿದ್ದಾರೆ ಹಾಗೂ ಗುರುವಾರ ನಂತರ ಅಲ್-ರೇದ್ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡುವ ನಿರೀಕ್ಷೆಯಿದೆ.

ಮುಂಬೈ ಸಿಟಿ FC  ತನ್ನ ತವರಿನ ಪಂದ್ಯಗಳನ್ನು ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News