×
Ad

ಬ್ರಿಟನ್ ಟೆನಿಸ್ ಆಟಗಾರ ಎಡ್ಮನ್ ನಿವೃತ್ತಿ

Update: 2025-08-19 21:17 IST

 ಕೈಲ್ ಎಡ್ಮಂಡ್ | PC :  X 

ಲಂಡನ್: ಬ್ರಿಟನ್‌ನ ಮಾಜಿ ನಂ.1 ಟೆನಿಸ್ ಆಟಗಾರ ಕೈಲ್ ಎಡ್ಮಂಡ್ ಸೋಮವಾರ ತನ್ನ 30ನೇ ವಯಸ್ಸಿನಲ್ಲಿ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಎರಡು ಬಾರಿ ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ್ದ ಎಡ್ಮಂಡ್ 2018ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ ಬ್ರಿಟನ್‌ನ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಆ್ಯಂಡಿ ಮರ್ರೆ ಮೊದಲ ಬಾರಿ ಈ ಸಾಧನೆ ಮಾಡಿದ್ದರು.

79 ವರ್ಷಗಳಲ್ಲಿ ಮೊದಲ ಬಾರಿ ಡೇವಿಸ್ ಕಪ್ ಗೆದ್ದಿದ್ದ ಬ್ರಿಟನ್ ತಂಡದ ಭಾಗವಾಗಿದ್ದ ಎಡ್ಮಂಡ್ ಅವರು 2016ರ ಒಲಿಂಪಿಕ್ ಗೇಮ್ಸ್‌ನಲ್ಲೂ ತನ್ನ ದೇಶವನ್ನು ಪ್ರತಿನಿಧಿಸಿದ್ದರು.

ಮೂರು ಬಾರಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಎಡ್ಮಂಡ್ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-50ಕ್ಕೆ ಕುಸಿದಿದ್ದರು. ಎರಡು ವರ್ಷಗಳ ಕಾಲ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದರು.

‘‘ಮೂರು ಸರ್ಜರಿ ಹಾಗೂ ಇತರ ಗಾಯಗಳಿಂದ ಚೇತರಿಸಿಕೊಳ್ಳಲು 5 ವರ್ಷಗಳು ಬೇಕಾದವು. ನನ್ನ ದೇಹವು ನಿವೃತ್ತಿಯಾಗುವಂತೆ ಪ್ರೇರೇಪಿಸಿದೆ. ನನ್ನ ವೃತ್ತಿಜೀವನದಲ್ಲಿ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿದ್ದೇನೆ. ನನಗೆ ಆ ವಿಚಾರದಲ್ಲಿ ಬೇಸರವಿಲ್ಲ’’ ಎಂದು ಎಡ್ಮಂಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News