×
Ad

ದಾಖಲೆಗಳ ಸುರಿಮಳೆಯ ಪಂದ್ಯದಲ್ಲಿ ಬೂಮ್ರಾ ವಿಶಿಷ್ಟ ಸಾಧನೆ

Update: 2023-11-03 09:36 IST

Photo: twitter.com/Jaspritbumrah93

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಭಾರತ- ಶ್ರೀಲಂಕಾ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ಭಾರತದ ಬೆಟ್ಟದಂಥ ಸವಾಲನ್ನು ಬೆನ್ನಟ್ಟುವ ಶ್ರೀಲಂಕಾ ಬ್ಯಾಟ್ಸ್ಮನ್ ಗಳ ಬೆನ್ನೆಲುಬು ಮುರಿಯುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾದರು.

ಶ್ರೀಲಂಕಾ ಇನಿಂಗ್ಸ್  ನ ಮೊದಲ ಎಸೆತದಲ್ಲೇ ಜಸ್ಪ್ರೀತ್ ಬೂಮ್ರಾ ವಿಕೆಟ್ ಪಡೆಯುವ ಮೂಲಕ 48 ವರ್ಷಗಳಲ್ಲೇ ಪ್ರಥಮ ಎನಿಸುವ ದಾಖಲೆ ನಿರ್ಮಿಸಿದರು. ಮೊದಲ ಎಸೆತದಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕಾ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಮಿಂಚಿನ ವೇಗದ ಚೆಂಡು ನಿಸ್ಸಾಂಕಾ ಅವರನ್ನು ವಂಚಿಸಿ ಪ್ಯಾಡ್ಗೆ ಬಡಿಯಿತು. ಅಂಪೈರ್ ತಕ್ಷಣ ಔಟ್ ಎಂದು ತೀರ್ಪು ನೀಡಿದರು. ಶ್ರೀಲಂಕಾ ರಿವ್ಯೂ ಅವಕಾಶವನ್ನು ಬಳಸಿಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ. ಎಡಬದಿಯ ಸ್ಟಂಪ್ ನ ಬೇಲ್ಸ್ ಹಾರಿಸುವ ಅವಕಾಶ ಇದ್ದ ಹಿನ್ನೆಲೆಯಲ್ಲಿ ಅಂಪೈರ್ ನಿರ್ಧಾರವನ್ನು ರಿವ್ಯೂ ಬಳಿಕ ದೃಢಪಡಿಸಲಾಯಿತು. ವಿಶ್ವಕಪ್ ಕ್ರಿಕೆಟ್ ನಲ್ಲಿ ಯಾವ ಭಾರತೀಯ ಬೌಲರ್ ಕೂಡಾ ಈ ಮೊದಲು ಪಂದ್ಯದ ಪ್ರಥಮ ಎಸೆತದಲ್ಲಿ ವಿಕೆಟ್ ಗಳಿಸಿರಲಿಲ್ಲ.

ವಿರಾಟ್ ಕೊಹ್ಲಿ ಮತ್ತೊಮ್ಮೆ 49ನೇ ಏಕದಿನ ಶತಕ ಗಳಿಸುವ ಅವಕಾಶದಿಂದ ವಂಚಿತರಾದರೂ, ಶ್ರೀಲಂಕಾ ವಿರುದ್ಧ 8 ವಿಕೆಟ್ ನಷ್ಟಕ್ಕೆ 357 ರನ್ಗಳ ಬೃಹತ್ ಮೊತ್ತಕ್ಕೆ ಗಣನೀಯ ಕೊಡುಗೆ ನೀಡಿದರು. 94 ಎಸೆತಗಳಲ್ಲಿ 88 ರನ್ ಗಳಿಸಿದ ಅವರು, ಶುಭ್ಮನ್ ಗಿಲ್ (92 ಎಸೆತಗಳಲ್ಲಿ 92) ಜತೆಗೆ 189 ರನ್ ಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇದಾದ ಸ್ವಲ್ಪಹೊತ್ತಿನಲ್ಲಿ ಆಟದ ಲಯ ಕಂಡುಕೊಂಡ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82 ರನ್ ಸಿಡಿಸಿದರು.

ಶ್ರೀಲಂಕಾ ಪರ 80 ರನ್ ಗಳಿಗೆ 5 ವಿಕೆಟ್ ಕಬಳಿಸಿದ ದಿಲ್ಷನ್ ಮದುಶಂಕಾ ಯಶಸ್ವಿ ಬೌಲರ್ ಎನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News