×
Ad

150 ಸಿಕ್ಸರ್ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಬಟ್ಲರ್

Update: 2025-01-25 22:07 IST

ಜೋಸ್ ಬಟ್ಲರ್ | PC : PTI 

ಚೆನ್ನೈ : ಸ್ಫೋಟಕ ಶೈಲಿಯ ಬ್ಯಾಟರ್ ಜೋಸ್ ಬಟ್ಲರ್ ಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 150 ಸಿಕ್ಸರ್‌ಗಳನ್ನು ಸಿಡಿಸಿದ ಇಂಗ್ಲೆಂಡ್‌ನ ಮೊದಲ ಕ್ರಿಕೆಟಿಗೆನೆಂಬ ಕೀರ್ತಿಗೆ ಭಾಜನರಾದರು.

ಭಾರತ ತಂಡದ ವಿರುದ್ಧ ಶನಿವಾರ ನಡೆದ 2ನೇ ಟಿ-20 ಪಂದ್ಯದ ವೇಳೆ 30 ಎಸೆತಗಳಲ್ಲಿ 45 ರನ್ ಗಳಿಸಿದ ಬಟ್ಲರ್ ಈ ಸಾಧನೆ ಮಾಡಿದರು.

2ನೇ ಪಂದ್ಯಕ್ಕಿಂತ ಮೊದಲು ಬಟ್ಲರ್ 147 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅರ್ಷದೀಪ್ ಸಿಂಗ್, ಸುಂದರ್ ಹಾಗೂ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ತಲಾ 1 ಸಿಕ್ಸರ್ ಸಿಡಿಸಿದ ಬಟ್ಲರ್, ಒಟ್ಟು 150 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.

ಇಂಗ್ಲೆಂಡ್ ನಾಯಕ ಬಟ್ಲರ್ ಟಿ-20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಸಿಡಿಸಿದ 4ನೇ ಬ್ಯಾಟರ್ ಆಗಿದ್ದಾರೆ.

ರೋಹಿತ್ ಶರ್ಮಾ(205 ಸಿಕ್ಸರ್), ಮಾರ್ಟಿನ್ ಗಪ್ಟಿಲ್(173) ಹಾಗೂ ಯುಎಇಯ ಮುಹಮ್ಮದ್ ವಸೀಂ(158)ಪಟ್ಟಿಯಲ್ಲಿ ಮೊದಲ 3 ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News