×
Ad

ಚಾಂಪಿಯನ್ಸ್ ಟ್ರೋಫಿ | ಭಾರತೀಯ ಆಟಗಾರರು ಕುಟುಂಬ ಸದಸ್ಯರೊಂದಿಗೆ ಇರುವಂತಿಲ್ಲ: ಬಿಸಿಸಿಐ

Update: 2025-02-14 23:26 IST

PC : X\ BCCI

ಮುಂಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ, ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಕುಟುಂಬ ಸದಸ್ಯರು ಆಟಗಾರರೊಡನೆ ಯುಎಇಗೆ ಪ್ರಯಾಣಿಸುವಂತಿಲ್ಲ. ಇದಕ್ಕೆ ಸಂಬಂಧಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀತಿಯು ಈ ಪಂದ್ಯಾವಳಿಯಲ್ಲಿ ಜಾರಿಗೆ ಬರಲಿದೆ.

ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ 2024-25 ಟ್ರೋಫಿಯಲ್ಲಿ ಭಾರತದ ನಿರಾಶಾದಾಯಕ 1-3 ಅಂತರದ ಸರಣಿ ಸೋಲಿನ ಹಿನ್ನೆಲೆಯಲ್ಲಿ, ಬಿಸಿಸಿಐ ನೂತನ ನಿಯಮಾವಳಿಗಳನ್ನು ಜನವರಿಯಲ್ಲಿ ಹೊರಡಿಸಿದೆ.

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಂದು ಆರಂಭಗೊಳ್ಳಲಿದ್ದು, ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ. ಅಂದರೆ ಈ ಪಂದ್ಯಾವಳಿಯು 45 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಯಲಿದೆ.

ಬಿಸಿಸಿಐ ನಿಯಮಗಳ ಪ್ರಕಾರ, ಪ್ರವಾಸವು 45 ದಿನಗಳಿಗಿಂತಲೂ ದೀರ್ಘವಾದರೆ, ಎರಡು ವಾರಗಳ ಕಾಲ ಜೊತೆಗಿರಲು ಆಟಗಾರರ ಕುಟುಂಬ ಸದಸ್ಯರಿಗೆ ಅವಕಾಶ ನೀಡಲಾಗುತ್ತದೆ. ಹಾಗಾಗಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಟಗಾರರೊಂದಿಗೆ ಇರಲು ಕುಟುಂಬ ಸದಸ್ಯರಿಗೆ ಅವಕಾಶ ನಿರಾಕರಿಸಲಾಗಿದೆ.

ಭಾರತವು ಬಾಂಗ್ಲಾದೇಶ (ಫೆಬ್ರವರಿ 20), ಪಾಕಿಸ್ತಾನ (ಫೆಬ್ರವರಿ 23) ಮತ್ತು ನ್ಯೂಝಿಲ್ಯಾಂಡ್ (ಮಾರ್ಚ್ 2) ವಿರುದ್ದದ ತನ್ನ ಗುಂಪು ಹಂತದ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಪಾಕಿಸ್ತಾನವು ಪಂದ್ಯಾವಳಿಯು ಆತಿಥೇಯ ದೇಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News