×
Ad

2025ರ ಆವೃತ್ತಿಯ ದುಲೀಪ್ ಟ್ರೋಫಿ ಆರಂಭಕ್ಕೆ ದಿನಗಣನೆ

Update: 2025-08-25 21:28 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.25: ಆಗಸ್ಟ್ 28ರಿಂದ ಸೆಪ್ಟಂಬರ್ 15ರ ತನಕ ನಡೆಯಲಿರುವ ದುಲೀಪ್ ಟ್ರೋಫಿಯ ಮೂಲಕ 2025-26ರ ಭಾರತೀಯ ದೇಶಿ ಕ್ರಿಕೆಟ್ ಋತು ಆರಂಭವಾಗಲಿದೆ. ಭಾರತದ ತವರಿನ ಟೆಸ್ಟ್ ಅಭಿಯಾನಕ್ಕಿಂತ ಮೊದಲು ಇದು ಪ್ರಮುಖ ಪೂರ್ವ ತಯಾರಿ ಟೂರ್ನಿಯಾಗಲಿದೆ. ಈ ವರ್ಷದ ದುಲೀಪ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ವಲಯ ಮಾದರಿಯು ಮರಳಲಿದೆ.

ಕಳೆದ ವರ್ಷ 4 ತಂಡಗಳನ್ನು ರಾಷ್ಟ್ರೀಯ ಆಯ್ಕೆದಾರರು ನೇರವಾಗಿ ಆಯ್ಕೆ ಮಾಡಿದ್ದರು.

ಈ ವರ್ಷದ ಸ್ಪರ್ಧೆಯಲ್ಲಿ ತಂಡಗಳು ಉತ್ತರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಕೇಂದ್ರ ವಲಯ ಹಾಗೂ ಈಶಾನ್ಯ ವಲಯಗಳನ್ನು ಪ್ರತಿನಿಧಿಸಲಿವೆ.

ಕ್ವಾರ್ಟರ್ ಫೈನಲ್‌ ನಲ್ಲಿ ಉತ್ತರ ವಲಯವು ಪೂರ್ವ ವಲಯವನ್ನು ಎದುರಿಸಿದರೆ, ಕೇಂದ್ರ ವಲಯವು, ಈಶಾನ್ಯ ವಲಯವನ್ನು ಎದುರಿಸಲಿದೆ.

2023ರ ವಲಯ ಆವೃತ್ತಿಯಲ್ಲಿ ಫೈನಲ್‌ ಗೆ ತಲುಪಿದ್ದ ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳು ಸೆಮಿ ಫೈನಲ್‌ಗೆ ನೇರ ಪ್ರವೇಶ ಪಡೆದಿವೆ. ಎಲ್ಲ ಪಂದ್ಯಗಳು ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಪಂದ್ಯಾವಳಿಯು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿದೆ.

ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ‘ಎ’ ತಂಡದ ಹಲವು ಆಟಗಾರರು ಹಾಗೂ ಮುಂಬರುವ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯಲು ಬಯಸಿರುವ ಟೆಸ್ಟ್ ಆಟಗಾರರು ಆಡಲಿದ್ದಾರೆ.

*ದುಲೀಪ್ ಟ್ರೋಫಿ ವೇಳಾಪಟ್ಟಿ

ಕ್ವಾರ್ಟರ್ ಫೈನಲ್-1

ಆಗಸ್ಟ್ 28ರಿಂದ 31ರ ತನಕ

ಉತ್ತರ ವಲಯ-ಪೂರ್ವ ವಲಯ

ಸ್ಥಳ: ಬಿಸಿಸಿಐ ಸಿಒಇ, ಗ್ರೌಂಡ್-1, ಬೆಂಗಳೂರು

ಕ್ವಾರ್ಟರ್ ಫೈನಲ್-2

ಆಗಸ್ಟ್ 28-31

ಕೇಂದ್ರ ವಲಯ-ಈಶಾನ್ಯ ವಲಯ

ಸ್ಥಳ: ಬಿಸಿಸಿಐ ಸಿಒಇ, ಗ್ರೌಂಡ್-2, ಬೆಂಗಳೂರು

ಸೆಮಿ ಫೈನಲ್-1

ಸೆಪ್ಟಂಬರ್ 4ರಿಂದ 7ರ ತನಕ

ದಕ್ಷಿಣ ವಲಯ-ಮೊದಲ ಕ್ವಾ.ಫೈನಲ್ ವಿಜೇತ ತಂಡ

ಸ್ಥಳ: ಬಿಸಿಸಿಐ ಸಿಒಇ, ಗ್ರೌಂಡ್-1, ಬೆಂಗಳೂರು

ಸೆಮಿ ಫೈನಲ್-2

ಸೆಪ್ಟಂಬರ್ 4ರಿಂದ 7ರ ತನಕ

ಉತ್ತರ ವಲಯ-2ನೇ ಕ್ವಾ.ಫೈನಲ್ ವಿಜೇತ ತಂಡ

ಸ್ಥಳ: ಬಿಸಿಸಿಐ ಸಿಒಇ, ಗ್ರೌಂಡ್-2, ಬೆಂಗಳೂರು

ಫೈನಲ್

ಸೆಪ್ಟಂಬರ್‌11ರಿಂದ 15ರ ತನಕ

ಸೆಮಿ ಫೈನಲ್-1 ವಿನ್ನರ್-ಸೆಮಿ ಫೈನಲ್ 2 ವಿನ್ನರ್

ಸ್ಥಳ: ಬಿಸಿಸಿಐ ಸಿಒಇ, ಗ್ರೌಂಡ್-1, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News