×
Ad

ಜೊಕೊವಿಕ್ ಕೊನೆಯ ಆಸ್ಟ್ರೇಲಿಯನ್ ಓಪನ್ ಆಡಿದರೆ?

Update: 2025-01-24 21:42 IST

ನೊವಾಕ್ ಜೊಕೊವಿಕ್ | PC : PTI  

ಮೆಲ್ಬರ್ನ್: ತನ್ನ ಕೊನೆಯ ಆಸ್ಟ್ರೇಲಿಯನ್ ಓಪನ್ ಆಡಿರಬಹುದು ಎನ್ನುವ ಸೂಚನೆಯನ್ನು ನೊವಾಕ್ ಜೊಕೊವಿಕ್ ಶುಕ್ರವಾರ ನೀಡಿದ್ದಾರೆ.

ಶುಕ್ರವಾರ ನಡೆದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಗಾಯಗೊಂಡು ನಿವೃತ್ತರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಅವರು ಈ ಇಂಗಿತ ವ್ಯಕ್ತಪಡಿಸಿದ್ದಾರೆ.

ನೀವು ಮೆಲ್ಬರ್ನ್ ಪಾರ್ಕ್ ಅಂಗಳಕ್ಕೆ ಕೊನೆಯ ಬಾರಿಗೆ ದಯ ಮಾಡಿಸಿರುವ ಸಾಧ್ಯತೆ ಇದೆಯೇ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಜೊಕೊವಿಕ್, ‘‘ಸಾಧ್ಯತೆಯಿದೆ. ಯಾರಿಗೆ ಗೊತ್ತು?’’ ಎಂದು ಹೇಳಿದರು.

‘‘ನಾನು ಸಾಮಾನ್ಯವಾಗಿ ಆಸ್ಟ್ರೇಲಿಯಕ್ಕೆ ಆಡಲು ಬರಲು ಇಷ್ಟಪಡುತ್ತೇನೆ. ನನ್ನ ಕ್ರೀಡಾ ಜೀವನದ ಗರಿಷ್ಠ ಯಶಸ್ಸನ್ನು ನಾನು ಇಲ್ಲೇ ಗಳಿಸಿದ್ದೇನೆ. ಹಾಗಾಗಿ, ನಾನು ದೈಹಿಕ ಕ್ಷಮತೆ ಹೊಂದಿದ್ದರೆ, ಆರೋಗ್ಯವಾಗಿದ್ದರೆ ಮತ್ತು ಉತ್ಸಾಹ ಹೊಂದಿದ್ದರೆ ಇಲ್ಲಿಗೆ ಬಾರದಿರಲು ನನಗೆ ಯಾವುದೇ ಕಾರಣ ಇಲ್ಲ’’ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News