×
Ad

ಸಿನ್ಸಿನ್ನಾಟಿ ಓಪನ್‌ ಟೆನ್ನಿಸ್: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ನೊವಾಕ್‌ ಜೊಕೊವಿಕ್‌

Update: 2023-08-21 12:32 IST

Photo: Twitter/@ani_digital

ಓಹಿಯೋ: ರವಿವಾರ ಓಹಿಯೋದ ಲಿಂಡರ್‌ ಫ್ಯಾಮಿಲಿ ಟೆನ್ನಿಸ್‌ ಸೆಂಟರ್‌ ಅಂಗಣದಲ್ಲಿ ಮೂರನೇ ಎಟಿಪಿ ಸಿನ್ಸಿನ್ನಾಟಿ ಓಪನ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಈಜಿಪ್ಟ್‌ನ ಕಾರ್ಲೊಸ್‌ ಅಲ್ಕರಾಝ್‌ ಜೊತೆ ನಡೆದ ರೋಚಕ ಹೋರಾಟದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಅವರು ಕೊನೆಗೂ ಗೆದ್ದು ಬೀಗಿದರು 5-7, 7-6 (9/7), 7-6 (7/4).

36 ವರ್ಷದ ಜೊಕೊವಿಕ್‌ ತಮಗಿಂತ 16 ವರ್ಷಗಳಷ್ಟು ಕಿರಿಯ ಆಟಗಾರನನ್ನು ಮೂರು ಗಂಟೆ 49 ಗಂಟೆಗಳ ಕಾಲ ನಡೆದ ಸೆಣಸಾಟದಲ್ಲಿ ಗೆದ್ದು 39ನೇ ಮಾಸ್ಟರ್ಸ್‌ 1000 ಕಿರೀಟವನ್ನು ತಮ್ಮದಾಗಿಸಿದರು.

ಅತ್ತ ಅಂತಿಮ ಪಂದ್ಯದಲ್ಲಿ ಸೋತ 20 ವರ್ಷದ ಅಗ್ರ ಶ್ರೇಣಿಯ ಅಲ್ಕರಾಝ್‌ ಅವರು ಕಣ್ಣೀರು ಸುರಿಸಿದ್ದಾರೆ.

ರನ್ನರ್‌ ಅಪ್‌ ಟ್ರೋಫಿ ಪಡೆಯುವಾಗಲೂ ಎರಡು ಬಾರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ವಿಜೇತ ಅರ್ಕರಾಝ್‌ ಮತ್ತೆ ಭಾವುಕರಾದರು. ಪಂದ್ಯ ಗೆದ್ದ ನೊವಾಕ್‌ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು “ನಿಮ್ಮೊಂದಿಗೆ ಆಟವಾಡುವುದು ಉತ್ತಮ ಕಲಿಕಾ ಅನುಭವ ಕೂಡ ನೀಡಿದೆ. ಈ ಪಂದ್ಯ ನಿಜಕ್ಕೂ ರೋಮಾಂಚನವಾಗಿತ್ತು. ನಿಮ್ಮಂತಹ ಚಾಂಪಿಯನ್‌ ಅವರಿಂದ ಬಹಳಷ್ಟು ಕಲಿತೆ,” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News